ನನ್ನ ಗೆಲುವನ್ನು ನೋಡಿ ಮೋದಿಯೇ ನಡುಗಿ ಹೋಗಿದ್ದರು ಎಂದ ಜೆಡಿಎಸ್ ನ ಈ ಶಾಸಕ..!!



ವಿಧಾನಸಭೆ ಚುನಾವಣೆಯಲ್ಲಿ ನನ್ನ ಗೆಲುವನ್ನು ನೋಡಿ ಪ್ರಧಾನಿ ಮೋದಿಯೇ ನಡುಗಿಹೋಗಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ನನ್ನನ್ನು 36 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ, ನೀವು ಗೆಲ್ಲಿಸಿರುವುದನ್ನು ನೋಡಿ ಪ್ರಧಾನಿ ಮೋದಿಯೇ ನಡುಗಿ ಹೋಗಿದ್ದಾರೆ ಎಂದು ಹೇಳಿದರು. ನಮ್ಮ ಪಕ್ಷಕ್ಕೆ ಬಹುಮತ ಸಿಕ್ಕಿಲ್ಲ, 37 ಸ್ಥಾನ ಗೆದ್ದರೂ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ಅದು ಚಾಮುಂಡೇಶ್ವರಿ ಮತದಾರರ ಆಶೀರ್ವಾದ, ಎಲ್ಲಾ ರೈತರಿಗೂ 1 ಲಕ್ಷ ರೂ. ಸಾಲ ಮನ್ನಾ ಮಾಡಿದ್ದಾರೆ. 115 ಸ್ಥಾನದಲ್ಲಿ ಗೆದ್ದಿದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತೇನೆ ಎಂದು ಹೇಳಿದ್ರು, ಆದರೆ ಜನ ಗೆಲ್ಲಿಸಲಿಲ್ಲ. ಒಂದು ವೇಳೆ ಗೆಲ್ಲಿಸಿದ್ದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬಹುದಿತ್ತು ಎಂದು ಹೇಳಿದರು.
Comments