ಹೇಮಾವತಿಪೇಟೆಯ ಮುತ್ಯಾಲಮ್ಮ ಸೇವಾ ಸಮಿತಿ ವತಿಯಿಂದ ಗೆದ್ದ ಮತ್ತು ಸೋತ ಅಭ್ಯರ್ಥಿಗಳಿಗೆ ಸನ್ಮಾನ







ಮೇ 19ರಂದು ನಡೆದಿದ್ದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳಾದ ಭಾಸ್ಕರ್,ದಿನೇಶ್,ನಾಗರಾಜ್ ಮತ್ತು ಕೋಮಲರವರಿಗೆ ಹೇಮಾವತಿಪೇಟೆ ಮುತ್ಯಾಲಮ್ಮ ಸೇವಾ ಸಮಿತಿ, ಯುವಕ ಸಂಘ ಹಾಗೂ ಮಹಿಳಾ ಸಂಘಗಳ ವತಿಯಿಂದ ದಿನಾಂಕ 15-7-2018 ರ ಭಾನುವಾರ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು, ಸಂಘದ ಅಧ್ಯಕ್ಷರಾದ ಚೌಡಪ್ಪನವರು ಗೆದ್ದ ಭಾಸ್ಕರ್ ರವರಿಗೆ ಅಭಿನಂದಿಸಿ ಮಾತನಾಡುತ್ತಾ ಚುನಾವಣೆ ಮುಗಿಯುವವರೆವಿಗೂ ಮಾತ್ರ ನಾವು ಆ ಪಕ್ಷ ಈ ಪಕ್ಷ ಎಂದು ಬೇರೆಯಾಗುತ್ತೇವೆ ಚುನಾವಣೆ ಮುಗಿದನಂತರ ಎಲ್ಲಾ ಒಂದೇ ಎಂದು ಹೇಳಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಚುನಾಯಿತ ಸದಸ್ಯ ಭಾಸ್ಕರ್ ಇರುವ ಕಾಲಾವದಿಯಲ್ಲಿ ತಮ್ಮಿಂದ ಆಗುವಷ್ಟು ಕೆಲಸಗಳನ್ನು ನಗರಸಭೆ ವತಿಯಿಂದ ಮಾಡಿಸುವೆ, ಈಗಾಗಲೇ ಬೋವಿ ಕಾಲೋನಿಯಲ್ಲಿರುವ ಎಲ್ಲಾ ಚರಂಡಿಗೆ ಸ್ಲಾಬ್ ಮತ್ತು ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ, ನೀರಿನ ಟ್ಯಾಂಕ್ ಬಳಿ ಸಿಹಿನೀರಿನ ಫಿಲ್ಟರ್ ಹಾಕಿಸಲಾಗುತ್ತಿದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ವಾರ್ಡ್ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನೂ ಕೇಳಿದರು. ಕಾರ್ಯಕ್ರಮದಲ್ಲಿ ಮುತ್ಯಾಲಮ್ಮ ಸೇವಾ ಸಮಿತಿ ಪದಾಧಿಕಾರಿಗಳು, ದೇವಾಂಗ ಪೇಟೆ ಯುವಕ ಸಂಘದ ಪದಾಧಿಕರಿಗಳು ಮತ್ತು ಕಾರ್ಯಕರ್ತರು, ಮಹಿಳಾ ಸಂಘದ ಪದಾಧಿಕಾರುಗಳು ಮತ್ತು ನಾಗರೀಕರು ಹಾಜರಿದ್ದರು.
Comments