ಎಲ್ಲದಕ್ಕೂ ಪ್ರೋತ್ಸಾಹ ಅತ್ಯಾವಶ್ಯಕ: ವೆಂಕಟೇಶ್
ಕೊರಟಗೆರೆ ಜೂ.14:-ಪ್ರತಿಯೊಂದು ಕೆಲಸಕ್ಕೂ ಪ್ರೋತ್ಸಾಹ ಎನ್ನುವುದು ಅತ್ಯಾವಶ್ಯಕ ಎಂದು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವೆಂಕಟೇಶ್ ತಿಳಿಸಿದರು. ಪಟ್ಟಣದ ಕನ್ನಿಕಾ ವಿದ್ಯಾಪೀಠಶಾಲೆಯ ಮಕ್ಕಳಿಗೆ ಧಾನಿಗಳಿಂದ ಸಂಗ್ರಹಿಸಿದ್ದ ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ನೀಡಿ ಮಾತನಾಡಿದರು.
ಶಾಲೆಯಲ್ಲಿ ವಿದ್ಯಾಬ್ಯಾಸಕ್ಕೆ ಪೂರಕ ವಾತಾವಣ ಕಲ್ಪಿಸಲಾಗುತ್ತದೆ ಇದರ ಜೊತೆ ಜೊತೆಗೆ ಪೋಷಕರು ಮನೆಯಲ್ಲಿ ಮಕ್ಕಳಿಗೆ ಅವಶ್ಯಕವಾಗಿರುವಂತಹ ವಸ್ತುಗಳನ್ನು ನೀಡಿ ಪ್ರೋತ್ಸಾಹಿಸಬೇಕು ಎಂದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ.ಜಿ ಬದ್ರಿಪ್ರಸಾದ್ ಮಾತನಾಡಿ ವಿದ್ಯೆ, ಆಹಾರ ಮತ್ತು ಆರೋಗ್ಯ ಪ್ರತಿಯೊಬ್ಬರಿಗೂ ಅತ್ಯಾವಶ್ಯವಾಗಿರುವಂತಹವುಗಳಾಗಿದ್ದು ಇವುಗಳನ್ನು ನಮ್ಮ ಯುವಜನ ಸಂಘದ ವತಿಯಿಂದ ಕಲ್ಪಿಸುವಂತಹ ಯೋಜನೆಗಳನ್ನು ಇಟ್ಟುಕೊಂಡಿರುವುದಾಗಿ ಹೇಳಿದರು.
ವಾಸವಿ ಯುವಜನ ಸಂಘದ ಕಾರ್ಯದರ್ಶಿ ಜಿ. ಲಕ್ಷ್ಮಿಪ್ರಸಾದ್, ಕನ್ನಿಕಾ ವಿದ್ಯಾಪೀಠ ಕಾರ್ಯದರ್ಶಿ ಕೆ.ಎಸ್.ವಿ ರಘು ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ಚಿನ್ನವೆಂಕಟಶೆಟ್ಟಿ, ಕನ್ನಿಕಾ ವಿದ್ಯಾಪೀಠ ಅಧ್ಯಕ್ಷ ಎಂ.ಜಿ ಸುಧೀರ್, ನಿರ್ದೇಶಕರಾದ ರಾಧಾಕೃಷ್ಣ, ಕನ್ನಿಕಾ ವಿದ್ಯಾಪೀಠ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ, ಶಿಕ್ಷಕಿಯರಾದ ಪಿ.ಸಿ ಮಮತ, ಸುಜಾತ ಸೇರಿದಂತೆ ಇತರರು ಇದ್ದರು. (ಚಿತ್ರ ಇದೆ)
Comments