ಮೋದಿ ಶಕ್ತಿ ಕ್ಷೀಣಿಸಿ ದೆಹಲಿಯಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ರಾಜ್ಯದ ದಳಪತಿ ಎಚ್’ಡಿಕೆ.!

ಕುಮಾರಸ್ವಾಮಿ ಜೆ.ಪಿ. ನಗರದ ಮನೆಯನ್ನು ಮಾರಲು ನಿರ್ಧರಿಸಿದರು.ಖರೀದಿ ಮಾಡಲು ಬಂದವರು ಮುಂಗಡ ಹಣವನ್ನೂ ನೀಡಿದರು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಕುಮಾರಸ್ವಾಮಿಯವರಿಗೆ ಮಹತ್ವದ ಸಂದೇಶವೊಂದು ಬಂದು ತಲುಪಿತು. ಆ ಸಂದೇಶ ಬಂದ ನಂತರ ಕುಮಾರಸ್ವಾಮಿ ಆ ಮನೆ ಮಾರದಿರಲು ನಿರ್ಧಾರ ಮಾಡಿದರು. ಏನು ಅಂತೀರಾ? ಹಾಗಾದ್ರೆ ಮುಂದೆ ಓದಿ..
ಕುಮಾರಸ್ವಾಮಿ ಈಗಿರೋ ಜೆಪಿ ನಗರದ ನಿವಾಸಕ್ಕೆ ಒಂದು ಕರಿನಾಗರ ಬಂದಿತ್ತು, ಆ ಕರಿನಾಗ ಅಂತಿಂಥದ್ದಾಗಿರಲಿಲ್ಲ, ಅದು ಅಕ್ಷರಶಃ ಅದೃಷ್ಟವನ್ನ ಹೊತ್ತು ತಂದಿತ್ತು, ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಅಧಿಕಾರ ಹಿಡಿಯುವಂತ ಲಕ್ ಅನ್ನು ಆ ಕರಿನಾಗರ ಕರುಣಿಸಿತ್ತು. ಮನೆಯಲ್ಲಿ ಯಾವಾಗ ಸರ್ಪ ಪ್ರತ್ಯಕ್ಷವಾಯ್ತೋ ಕುಮಾರಸ್ವಾಮಿ ಅಂದೇ ನಿರ್ಧಾರ ಮಾಡಿ ಬಿಟ್ಟಿದ್ದರು, ಯಾವುದೇ ಕಾರಣಕ್ಕೂ ಈ ಮನೆಯನ್ನ ಬಿಡಬಾರದು ಅಂತಾ ದೃಢ ನಿರ್ಧಾರ ಮಾಡಿದ್ದಾರೆ. ಕುಮಾರಸ್ವಾಮಿಯವರೇ ಕರಿನಾಗರ ನಿಮ್ಮ ಮನೆಯಲ್ಲಿ ಕಾಣಿಸಿಕೊಂಡಿದೆ ಎಂದರೆ ನೀವು ಕಳೆದುಕೊಂಡ ವೈಭವವನ್ನು ಮರಳಿ ಪಡೆಯುತ್ತೀರಿ. ಮುಖ್ಯಮಂತ್ರಿಗಿರಿ ಮಾತ್ರವಲ್ಲ, ನಿಮ್ಮ ತಂದೆಯಂತೆಯೇ ಈ ದೇಶದ ಪ್ರಧಾನಿಯಾಗುವ ಅವಕಾಶವೂ ಇದೆ. ಹಾಗಂತ ಕರಿ ನಾಗರ ಯಾವ ಮನೆಯಲ್ಲಿ ಕಾಣುತ್ತದೋ? ಆ ಮನೆಯವರಿಗೆಲ್ಲ ಇಂತಹ ಪಟ್ಟ ಒದಗುತ್ತದೆ ಎಂದು ಹೇಳಲಾಗದು. ಆದರೆ ನಿಶ್ಚಿತವಾಗಿ ಅವರು ತಮ್ಮ ಬದುಕಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಅವಕಾಶಗಳಿರುತ್ತವೆ. ನಿಮಗೆ ರಾಜಕೀಯವೇ ಸರ್ವಸ್ವ. ಹೀಗಾಗಿ ನಿಮ್ಮ ಗ್ರಹಗತಿಗಳಿಗೆ ಕರಿನಾಗರ ಕಂಡಿರುವುದು ಪೂರಕ. ಹಾಗೆಯೇ ನೀವು ಡೆಡ್ಲಿ ಪವರ್ ಹೊಂದುತ್ತೀರಿ.
Comments