ಅರಳುಮಲ್ಲಿಗೆ ಗ್ರಾಮಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿಜೆಪಿಯ ಪಾರ್ವತಮ್ಮ ಈರಪ್ಪ ಆಯ್ಕೆ





ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಚುನಾವಣೆಗೆ ನಿಂತ ಇಬ್ಬರು ಅಭ್ಯರ್ಥಿಗಳಿಗೆ ತಲಾ ಒಂಬತ್ತು ಮತಗಳು ಬಿದ್ದು ಸಮಬಲ ಹೊಂದಿದಾಗ ಅಭ್ಯರ್ಥಿಗಳ ಹೆಸರನ್ನು ಡ್ರಾ ಹಾಕುವ ಮೂಲಕ ಚುನಾಯಿಸಿದರು, ಈ ಅಧ್ಯಕ್ಷ ಚುನಾವಣೆಯಲ್ಲಿ ಪ್ರಮುಖ ಪಾತ್ರವನ್ನು ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಹೆಚ್.ಎಸ್.ಶಿವಶಂಕರ್ ವಹಿಸಿದ್ದರು. ನಗರ ಬಿಜೆಪಿ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ, ಹಾಗೂ ಜಿಲ್ಲಾ ಬಿಜೆಪಿ ಯುವಮೊರ್ಚಾ ಉಪಧ್ಯಕ್ಷ ಶಿವ ಉಪಸ್ಥಿತರಿದ್ದರು. ದೊಡ್ಡಬಳ್ಳಾಪುರ ತಾಲ್ಲೂಕಿನ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮತಿ ಪಾರ್ವತಮ್ಮ ರವರಿಗೆ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರು ಬಿಜೆಪಿಯ ಹಿರಿಯ ಮುಖಂಡರು ಕೆ.ಎಂ ಹನುಮಂತರಾಯಪ್ಪ, ಮಾಜಿ ಸಚಿವರು ಬಿ.ಎನ್ ಬಚ್ಚೇಗೌಡರು ಹಾಗೂ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ, ಹಾಗೂ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಎಚ್.ಎಸ್ ಶಿವಶಂಕರ್ ರವರು ಹಾಗೂ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರದ ಶ್ರೀಮತಿ ವತ್ಸಲ ಹಾಗೂ ಬಿಜೆಪಿಯ ಎಲ್ಲಾ ಮುಖಂಡರುಗಳು ಅಭಿನಂದನೆ ಸಲ್ಲಿಸಿದರು.
Comments