ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್..! ರೈತರ ಈ ವರೆಗಿನ ಸಾಲಮನ್ನಾ..!?

ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸಹಕಾರ ಸಂಘದಲ್ಲಿರುವ 2018 ರ ಜುಲೈ 10 ರ ವರೆಗಿನ ಸಾಲ ಮನ್ನಾ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ರೈತರ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಲು ನಿರ್ಧರಿಸಲಾಗಿದ್ದು, 22 ಲಕ್ಷ ರೈತರಿಗೆ ಇದು ಪ್ರಯೋಜನವಾಗಲಿದೆ. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ಒಟ್ಟು ಸಾಲ 44 ಸಾವಿರ ಕೋಟಿ. ಸಹಕಾರ ಸಂಘಗಳಲ್ಲಿರುವ ಒಟ್ಟು ಸಾಲ 10,750 ಕೋಟಿ ಇದರಲ್ಲಿ 2 ಲಕ್ಷದವರೆಗೆ ಬೆಳೆ ಸಾಲ ಮನ್ನಾ ಮಾಡಲಾಗಿದೆ. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್ ನ 6500 ಕೋಟಿ ಸಾಲವನ್ನು ನಾಲ್ಕು ಹಂತಗಳಲ್ಲಿ ಪಾವತಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
Comments