ಗುರುಪೂರ್ಣಿಮಾ, ಗುರುವಂದನಾ ಕಾರ್ಯಕ್ರಮ...ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸಿಹಳ್ಳಿಯಲ್ಲಿ





29-7-2018 ರ ಭಾನುವಾರದಂದು ಗುರುಪೂರ್ಣಿಮೆ ಪ್ರಯುಕ್ತ ಶ್ರೀ ಪುಷ್ಪಾಂಡಜ ಮಹರ್ಷಿ ಆಶ್ರಮ, ತಪಸಿಹಳ್ಳಿಯಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರಿಗೆ ಗುರುವಂದನಾ ಕಾರ್ಯಕ್ರಮವನ್ನು ಅಖಿಲ ಭಾರತ ತೊಗಟವೀರ ಕ್ಷತ್ರಿಯ ಸಂಘಗಳ ಮಹಾಮಂಡಲ ವತಿಯಿಂದ ಆಯೋಜಿಸಲಾಗಿದೆ, ಎಲ್ಲರೂ ಆಶ್ರಮಕ್ಕೆ ಆಗಮಿಸಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗುರು ಸಂದೇಶವನ್ನು ಕೇಳಬೇಕೆಂದು ಆಡಳಿತ ಮಂಡಲಿಯವರು ವಿನಂತಿಸಿದ್ದಾರೆ. ಕಾರ್ಯಕ್ರಮದ ವಿವರ: ಬೆಳಿಗ್ಗೆ 8 ಘಂಟೆಗೆ ಸರಸ್ವತಿ ಹೋಮ, 9-30 ಕ್ಕೆ ದೇವರನಾಮಗಳು, 10-30 ರಿಂದ ಸಭಾ ಕಾರ್ಯಕ್ರಮ, 11 ಕ್ಕೆ ಶಾಲಾ ಕಟ್ಟಡ ದಾನಿಗಳಿಗೆ ಸನ್ಮಾನ, 12 ರಿಂದ ಗುರುಗಳ ಆಶೀರ್ವಚನ ಹಾಗೂ ಧ್ಯಾನ, 12-30 ಕ್ಕೆ ಅತಿಥಿಗಳ ನುಡಿ, 12-50 ರಿಂದ ಗುರುಗಳಿಗೆ ನಮನ ಹಾಗೂ ಭಕ್ತರಿಗೆ ಆಶೀರ್ವಚನ. ಹೆಚ್ಚಿನ ಮಾಹಿತಿಗೆ:- 8618502157, 9141396699, 8073390260,
Comments