ಅಭಿವೃದ್ಧಿ ಹರಿಕಾರರೇ, ನಗರಸಭೆ ಸದಸ್ಯರೇ ಇತ್ತ ಗಮನಿಸಿ!






ಇಂದು ಮಧ್ಯಾನ್ಹ ಸುರಿದ ಮಳೆಗೆ ನಗರದ ತೇರಿನಬೀದಿ ರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನ ಸವಾರರು ತೀವ್ರವಾಗಿ ಪರದಾಡುವಂತಾಯಿತು, ಬಿದ್ದದ್ದು ಸಾದಾರಣ ಮಳೆ ಇದಕ್ಕೇ ಹೀಗಾದರೆ, ಅತಿವೃಷ್ಠಿಯಾದರೆ ಏನು ಕಥೆ? ಮೋರಿಯಲ್ಲಿ ಹರಿದು ಹೋಗಬೇಕಿದ್ದ ನೀರೆಲ್ಲಾ ರಸ್ತೆಗೆ ಬಂದು ಜಲಾಶಯದಂತೆ ಮಾರ್ಪಾಡಾಗಿತ್ತು. ಕಳೆದ ವರ್ಷ ತೇರಿನ ಬೀದಿಯ ಒಂದು ಬದಿ ಚರಂಡಿಯನ್ನು ಇರುವುದರಲ್ಲೇ ದೊಡ್ದದಾಗಿ ನಿರ್ಮಿಸಲಾಗಿದೆ ಆದರೂ ಈ ಅವ್ಯವಸ್ಥೆ ಯಾಕೆ? ಚರಂಡಿ ನಿರ್ವಹಣೆಗೇ ಪ್ರತೀ ವರ್ಷ ಕೋಟ್ಯಾಂತರ ರೂ. ಖರ್ಚು ಮಾಡುವ ನಗರಸಭೆಯವರು ಈ ಕೂಡಲೇ ಗಮನ ಹರಿಸಲಿ.
Comments