ನಿರುದ್ಯೋಗಿಗಳಿಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ : ಇಲ್ಲಿದೆ ನೋಡಿ ಭರ್ಜರಿ ನೇಮಕಾತಿಯ ಕಂಪ್ಲೀಟ್ ಡೀಟೇಲ್ಸ್
ಗೃಹ ಇಲಾಖೆ ಅಡಿ ಬರುವ ಪೊಲೀಸ್ ಮತ್ತು ಕಾರಾಗೃಹ ಸೇರಿದಂತೆ ವಿವಿಧ ಇಲಾಖೆಯಲ್ಲಿ 31,694 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುವುದಾಗಿ ಗೃಹ ಸಚಿವ,ಉಪಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಹೇಳಿದರು.
ಪ್ರಶ್ನೋತ್ತರ ವೇಳೆ ಬಿಜೆಪಿಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2008-2013ರ ಅವಧಿಯಲ್ಲಿ ಯಾವುದೇ ಹುದ್ದೆಗಳು ಭರ್ತಿ ಆಗದ ಕಾರಣ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿದ್ದವು. ಹೀಗಾಗಿ ಕಳೆದ ಐದು ವರ್ಷಗಳಲ್ಲಿ 26,188 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈಗ ಹೊಸದಾಗಿ 12,139 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದರು. ಪೊಲೀಸ್ ಇಲಾಖೆಯಲ್ಲಿ 1,12,975 ಹುದ್ದೆಗಳು ಮಂಜೂರಾಗಿದ್ದು, 26,105 ಹುದ್ದೆಗಳು ಖಾಲಿ ಇದೆ, ಕಾರಾಗೃಹ ಇಲಾಖೆಯಲ್ಲಿ ಮಂಜೂರಾದ 3459 ಹುದ್ದೆಗಳ ಪೈಕಿ 1763 ಖಾಲಿ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ನಾಲ್ಕೈದು ಜನರು ನಿವೃತ್ತರಾಗುತ್ತಾರೆ. ಇವುಗಳನ್ನು ತಕ್ಷಣ ಭರ್ತಿ ಮಾಡಲಿಲ್ಲ, ಜೊತೆಗೆ ಈ ಹಿಂದಿನ ಆಡಳಿತ ಅವಧಿಯಲ್ಲಿ ಹುದ್ದೆ ಭರ್ತಿ ಮಾಡದ ಕಾರಣ ದೊಡ್ಡ ಪ್ರಮಾಣದಲ್ಲಿ ಹುದ್ದೆ ಖಾಲಿ ಉಳಿದಿವೆ. ಈಗ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಹುದ್ದೆಗಳನ್ನು ಕೆಪಿಎಸ್‌ಸಿ ಹಾಗೂ ಮುಂಬಡ್ತಿ ಮೂಲಕ ಮತ್ತು ನೇರ ನೇಮಕದ ಮೂಲಕ ಭರ್ತಿ ಮಾಡಲಾಗುವುದು ಎಂದು ವಿವರಿಸಿದರು. ಆರ್ಡರ್ಲಿ ಪದ್ಧತಿ ರದ್ದತಿಗೆ ಬದ್ಧ : ಗೃಹ ಇಲಾಖೆಯಲ್ಲಿ ಆರ್ಡರ್ಲಿ ಪದ್ದತಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸರ್ಕಾರ ಬದ್ಧವಾಗಿದೆ. ಸುಮಾರು ಮೂರು ಸಾವಿರ ತರಬೇತಿ ಪಡೆದ ಪೊಲೀಸರು ಅರ್ಡರ್ಲಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಈಗ ಆ ಪದ್ಧತಿಯನ್ನು ಹಂತ ಹಂತವಾಗಿ ತೆಗೆಯಲಾಗುವುದು. ಆರ್ಡರ್ಲಿ ಬದಲಾಗಿ ಫಾಲೋಯರ್ಸ್ ನೇಮಕ ಮಾಡುತ್ತಿದ್ದೇವೆ ಎಂದು ಡಾ.ಪರಮೇಶ್ವರ್ ತಿಳಿಸಿದರು.
Comments