ಸಾಲ ಮನ್ನಾ ಯೋಜನೆಗೆ ರೋಚಕ ಟ್ವಿಸ್ಟ್: ಕುಮಾರಣ್ಣ ನಿಂದ ರೈತರಿಗೆ ಸಿಗಲಿದೆ ಮತ್ತೊಂದು ಸಿಹಿಸುದ್ದಿ

11 Jul 2018 2:29 PM |
16447 Report

ಮೈತ್ರಿ ಸರಕಾರದ ಬೊಚ್ಚಲ ಬಜೆಟ್ ನಲ್ಲಿ ರೈತರ ‘ಸಾಲ ಮನ್ನಾ’ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು, ಈ ಯೋಜನೆಯಲ್ಲಿ ಕೆಲ ಷರತ್ತುಗಳನ್ನು ಒಡ್ಡಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಬಂಪರ್ ಕೊಡುಗೆ ನೀಡಲು ಮುಂದಾಗಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ .

ಸುಸ್ತಿ ಸಾಲದ ಜೊತೆಗೆ ಚಾಲ್ತಿ ಸಾಲವನ್ನೂ ಮನ್ನಾ ಮಾಡಲು ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಿರ್ಧರಿಸಿದ್ದು, ಜೊತೆಗೆ ಸಾಲ ನವೀಕರಿಸಿಕೊಂಡ ರೈತರಿಗೂ ಕೊಡುಗೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಸರ್ಕಾರದ ಈ ನಿರ್ಧಾರದಿಂದ ಸಾಲ ಮನ್ನಾ ಯೋಜನೆಗೆ ಬಜೆಟ್ ನಲ್ಲಿ ಘೋಷಿಸಿದ್ದ 34 ಸಾವಿರ ಕೋಟಿ ರೂ. ಜೊತೆಗೆ ಇನ್ನೂ 8-10 ಸಾವಿರ ಕೋಟಿ ರೂ ಹೆಚ್ಚುವರಿ ಹೊರೆ ಬೀಳಲಿದೆ ಎನ್ನಲಾಗಿದೆ,

Edited By

Shruthi G

Reported By

hdk fans

Comments