ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ: ಘೋಷಿಸಿದ ಕುಮಾರಣ್ಣ
ಮಲೆನಾಡಿನ ಸಮಸ್ಯೆಗಳನ್ನು ಅರಿಯಲು ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಮಲೆನಾಡಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ.ಅಲ್ಲೇ ಉಳಿದು ಅಲ್ಲಿನ ಸಮಸ್ಯೆಗಳ ಅರಿಯಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ಮುನ್ನ ಸದನದಲ್ಲಿ ಮಾತನಾಡಿದ್ದ ತೀರ್ಥಹಳ್ಳಿ ಶಾಸಕ ಅರಹ ಜ್ಞಾನೇಂದ್ರ ಮುಗ್ದ ಬಾಲಕಿಯೊಬ್ಬಳು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋದ ಬಗ್ಗೆ ವಿವರಿಸಿದರು. ಜತೆಗೆ ಮಲೆನಾಡಿನ ಸಮಸ್ಯೆಗಳು ಎಷ್ಟು ಗಂಭೀರವಾಗಿದೆ ಎಂದು ಸಹ ಅವರು ಸದನಕ್ಕೆ ಮನದಟ್ಟು ಮಾಡಿದರು. ಶಾಸಕರ ವಿವರಣೆ ಕೇಳಿದ ಕುಮಾರಸ್ವಾಮಿ ತಾನು ಮಲೆನಾಡಿನಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ ಎಂದದ್ದಲ್ಲದೆ ಮೃತ ಆಗುಂಬೆಯ ಕೆಂದಾಳುಬೈಲುಸಮೀಪ ದೊಡ್ಲಿಮನೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆಶಿಕಾ (14) ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನಿಡುವುದಾಗಿ ಘೋಷಿಸಿದ್ದಾರೆ. ಮುಂದೆ ಇಂತಹ ಘಟನೆ ನಡೆಯದಂತೆ ಕಾಳಜಿ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುತ್ತೇನೆ." ಅವರು ಟ್ವೀಟ್ ಮಾಡಿದ್ದಾರೆ.
Comments