ಉದ್ಯೋಗ್ ಆಧಾರ್ ನೊಂದಣಿ ಕಾರ್ಯಕ್ರಮ ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘ ಇವರ ವತಿಯಿಂದ






ಬೆಂಗಳೂರಿನ ರಾಜಾಜಿನಗರದಲ್ಲಿರುವ ಮಿನಿಸ್ಟ್ರಿ ಆಫ್ ಮೈಕ್ರೋ,ಸ್ಮಾಲ್ ಅಂಡ್ ಮೀಡಿಯಂ ಎಂಟರ್ ಪ್ರೈಸಸ್, ಭಾರತ ಸರ್ಕಾರ, ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘ ಮತ್ತು ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಸಹಯೋಗದೊಂದಿಗೆ ಇಂದು ಮಿತ್ರ ಬಳಗ ಟ್ರಸ್ಟ್ ಕಾರ್ಯಾಲಯದಲ್ಲಿ ದೊಡ್ದಬಳ್ಳಾಪುರ ನಗರದ ಸಣ್ಣ ವ್ಯಾಪಾರಸ್ಥರಿಗಾಗಿ ಉದ್ಯೋಗ್ ಆಧಾರ್ ನೊಂದಣಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಬೆಂಗಳೂರಿನ ಎಂಎಸ್ ಎಂಇ ಕಾರ್ಯಾಲಯದಿಂದ ಆಗಮಿಸಿದ್ದ ಮಹಿಳಾ ಅಧಿಕಾರಿ ಸುಮನ ಎಸ್. ರಾಜು. ಅಸಿಸ್ಟೆಂಟ್ ಡೈರೆಕ್ಟರ್, ಎಂಎಸ್ ಎಂಇ, ನೊಂದಣಿಗೆ ಆಗಮಿಸಿದ್ದ ಸಣ್ಣ ಮಹಿಳಾ ಮತ್ತು ಪುರುಷ ವ್ಯಾಪಾರಸ್ಥರಿಗೆ ಉದ್ಯೋಗ್ ಆಧಾರ್ ನೊಂದಣಿ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ವಿವರಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹೇಳಿದರು, ಮೊದಲ ಹಂತವಾಗಿ ಇಂದು ಇಪ್ಪತ್ತು ಮಂದಿ ಮಹಿಳಾ ಉದ್ಯೋಗಿಗಳು ತಮ್ಮ ವ್ಯಾಪಾರವನ್ನು ನೊಂದಣಿ ಮಾಡಿಸಿದರು. ಸ್ಪೂರ್ತಿ ವಿವಿಧೋದ್ದೇಶ ಮಹಿಳಾ ಸಂಘದ ಅಧ್ಯಕ್ಷೆ ವತ್ಸಲ, ಕಾರ್ಯದರ್ಶಿ ಗಿರಿಜ, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ನ ಕಾರ್ಯದರ್ಶಿ ರಮೇಶ್, ಟ್ರಸ್ಟೀಗಳಾದ ಶಿವಾನಂದ್, ಕೆ.ಎಂ.ಕೆ. ಮೂರ್ತಿ, ಸುಧಾಕರ್ ಮತ್ತಿತರರು ಹಾಜರಿದ್ದರು.
Comments