ಬಿಪಿಎಲ್ ಕಾರ್ಡುದಾರರಿಗೆ ಸಿಹಿಸುದ್ದಿ ಕೊಟ್ಟ ಕುಮಾರಣ್ಣ..!! ಏನ್ ಆ ಬಂಪರ್ ಕೊಡುಗೆ ಗೊತ್ತಾ?

ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ಸರ್ಕಾರದ ಮೊದಲನೇಯ ಬಜೆಟ್ ಮುಗಿದಿದ್ದು, ಇದೀಗ ಕುಮಾರಣ್ಣ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇತ್ತಿಚಿಗೆ ಸರ್ಕಾರವು ನಾನಾ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ, ಶಿಕ್ಷಣಕ್ಕಾಗಿ, ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ರಾಜ್ಯದ ಎಲ್ಲ ವರ್ಗಗಳಿಗೂ ಕೂಡ ಅನುಕೂಲವಾಗಲಿ ಎಂದು ಸರ್ಕಾರವು ಆರೋಗ್ಯ ಕರ್ನಾಟಕ ಯೋಜನೆಯನ್ನು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದಿತ್ತು, ರಾಜ್ಯದಲ್ಲಿ ಶ್ರೀಮಂತರಿಗೆ ಸಿಗುವ ಎಲ್ಲಾ ರೀತಿಯ ವೈದ್ಯಕಿಯ ಸೇವೆಗಳು ಜನ ಸಾಮಾನ್ಯರಿಗೂ ತಲುಪಿಸುವುದು ಆರೋಗ್ಯ ಕರ್ನಾಟಕ ಯೋಜನೆಯ ಉದ್ದೇಶವಾಗಿತ್ತು.
ದೇಶದಲ್ಲಿ ಇದೇ ಮೊದಲ ಬಾರಿಗೆ ಜಾರಿಗೆ ತಂದಿರುವ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು. ಈ ಯೋಜನೆಯಲ್ಲಿ ರಾಜ್ಯದ ಎಲ್ಲಾ ಕುಟುಂಬಕ್ಕೆ 1.5 ಲಕ್ಷ ರೂಪಾಯಿ ವರೆಗಿನ ವೈದ್ಯಕೀಯ ವೆಚ್ಚವನ್ನ ಸರ್ಕಾರವೇ ಭರಿಸುವ ಮೂಲಕ ಸಾಮಾನ್ಯ ಜನರ ಆರೋಗ್ಯ ಭದ್ರತೆಗಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿದೆ ಎನ್ನಲಾಗಿದೆ. ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1.5 ಲಕ್ಷ ರೂಪಾಯಿ ವರೆಗಿನ ಚಿಕಿತ್ಸೆ ಉಚಿತವಾಗಿರಲಿದೆ ಅಲ್ಲದೆ ಹೆಚ್ಚುವರಿಯಾಗಿ 50 ಸಾವಿರ ರೂಪಾಯಿಗಳ ಚಿಕಿತ್ಸೆ ನೀಡಲಿದೆ. ಒಟ್ಟಿನಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿ ಒಂದು ಮಹತ್ವದ ಯೋಜನೆಯು ಜಾರಿಗೆ ಬರುವಂತೆ ಮಾಡಿರುವುದು ಸಾಮಾನ್ಯ ಜನರಲ್ಲಿ ಮಂದವಾಸ ಮಾಡುವಂತೆ ಮಾಡಿದೆ.
Comments