ಮೋದಿ ಅಭಿಮಾನಿಗಳ, ಅಭಿಮಾನದ ಸುದರ್ಶನ ಹೋಮ

08 Jul 2018 4:05 PM |
584 Report

ದೊಡ್ಡಬಳ್ಳಾಪುರ ಮೋದಿ ಸೇನೆ ಅಭಿಮಾನಿ ಬಳಗದವರಿಂದ ದಿನಾಂಕ 08/07/2018 ಇಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೂ ಸುದರ್ಶನ ಹೋಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಬೆಳಿಗ್ಗೆ 9 ಕ್ಕೆ ಮಹಿಳೆಯರಿಂದ ಲಲಿತಾ ಸಹಸ್ರನಾಮ ದೊಂದಿಗೆ ಪ್ರಾರಂಭವಾಗಿ, ಸಂಕಲ್ಪ,ಅಭಿಷೇಕ, ಸುದರ್ಶನ ಪೂಜೆ ನಂತರ ಸುದರ್ಶನಹೋಮ ನಡೆಯಿತು. ಜನಪ್ರಿಯ ವಿಶ್ವನಾಯಕರಾದ, ವಿಶ್ವಶಾಂತಿಗಾಗಿ ಶ್ರಮಿಸುತ್ತಿರುವ ನರೇಂದ್ರ ಮೋದಿ ಯವರ ಆಯುಷ್ಯ, ಆರೋಗ್ಯ ಮತ್ತು ಅಭಿಲಾಷೆ ಈಡೇರಲೆಂದು ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿರುವ ಪ್ರಸಿದ್ಧ ದೇವಾಲಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಸನ್ನಿಧಿಯಲ್ಲಿ, ವಿದ್ವಾನ್ ಶ್ರೀ ಶ್ರೀನಿವಾಸ ಬಟ್ಟರ ಮಾರ್ಗದರ್ಶನದಲ್ಲಿ ಮೋದಿ ಅಭಿಮಾನಿಗಳ, ಅಭಿಮಾನದ "ಸುದರ್ಶನ ಹೋಮ" ವನ್ನು ಯಶಸ್ವಿಯಾಗಿ ನಡೆಸಲಾಯಿತು. ದೊಡ್ಡಬಳ್ಳಾಪುರ ತಾಲ್ಲೂಕಿನ ಸಮಸ್ತ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ಹಿರಿಯರು ಕಾರ್ಯಕ್ರಮಕ್ಕೆ ಆಗಮಿಸಿ ನೆಚ್ಚಿನ ಪ್ರಧಾನಿಯವರಿಗಾಗಿ ಪ್ರಾರ್ಥಿಸಿದರು.

ಕಾರ್ಯಕ್ರಮಕ್ಕೆ ರವಿ ಮಾವಿನಕುಂಟೆ ಯವರ ಮಾರ್ಗದರ್ಶನ, ಬಸವರಾಜುರವರ ಮುಂದಾಳತ್ವದಲ್ಲಿ ಕೆಂಪೇಗೌಡ, ದಾಕ್ಷಾಯಣಿ, ಉಮಾ ಮಹೇಶ್ವರಿ ಮತ್ತು ಕಮಲರವರು ಕಾರ್ಯಕ್ರಮ ನಡೆಸಿಕೊಟ್ಟರು.  ಮಾಜಿ ನಗರಸಭಾ ಅಧ್ಯಕ್ಷ ಮುದ್ದಪ್ಪ, ಸ್ಥಾಯಿಸಮಿತಿ ಅಧ್ಯಕ್ಷ ಶಿವಶಂಕರ್, ಶಿವರಾಜು ತಾಲ್ಲೂಕಿನ ಮೋದಿ ಅಭಿಮಾನಿಗಳು ಹಾಜರಿದ್ದರು.

 

Edited By

Ramesh

Reported By

Ramesh

Comments