ವಿದ್ಯಾರ್ಥಿಗಳ ಬಸ್ ಪಾಸ್ ಕುರಿತು ಮಹತ್ವದ ನಿರ್ಧಾರ..! ರಿಯಾಯಿತಿ ದರದಲ್ಲಿ ಬಸ್ ಪಾಸ್, ಎಷ್ಟು ಪರ್ಸೆಂಟ್ ಗೊತ್ತಾ..!?
ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ಘೋಷಣೆ ಸಾಧ್ಯತೆಗೆ ದೋಸ್ತಿ ಸರಕಾರ ಎಳ್ಳು ನೀರು ಬಿಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಸರಿ ಸುಮಾರು ಒಟ್ಟು 18 ಲಕ್ಷ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಭಾಗ್ಯದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ.
ಬಜೆಟ್ ನಲ್ಲಿ 1800 ಕೋಟಿ ಅನುದಾನ ಸಿಗದ ಕಾರಣ ಉಚಿತ ಪಾಸ್ ವಿತರಣೆಗೆ ಸಾರಿಗೆ ಇಲಾಖೆ ಹಿಂದೇಟು ಹಾಕಿದೆ ಎನ್ನಲಾಗಿದ್ದು,. ಅನುದಾನ ಕೈತಪ್ಪಿ ಹೋದ ಕಾರಣ ರಿಯಾಯಿತಿ ದರದ ಬಸ್ ವಿತರಣೆ ಮಾಡುವಂತೆ ಬಿಎಂಟಿಸಿ, ಕೆ.ಎಸ್.ಆರ್.ಟಿ.ಸಿ, ಈಶಾನ್ಯ, ವಾಯುವ್ಯ ಸಾರಿಗೆ ನಿಗಮದ ಎಂ.ಡಿಗಳಿಗೆ ಸಾರಿಗೆ ಸಚಿವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ಘೋಷಣೆ ಮಾಡಿತ್ತು. ಆದರೆ ಅನುದಾನ ಬಿಡುಗಡೆ ಮಾಡಿರಲಿಲ್ಲ, ಈ ಬಜೆಟ್ ನಲ್ಲಿ ಅನುದಾನವನ್ನು ಬಿಡುಗಡೆ ಮಾಡುವ ಬಗ್ಗೆ ಕೂಡ ಸಾರಿಗೆ ಸಚಿವರ ನಿರೀಕ್ಷೆಯನ್ನು ಹೊಂದಿದ್ದರು ಆದರೆ ನಿರೀಕ್ಷಿತ ಮಟ್ಟದಲ್ಲಿ ಸಾರಿಗೆ ಇಲಾಖೆಗೆ ಅನುದಾನ ಸಿಗದೇ ಹೋಗಿರುವ ಕಾರಣಕ್ಕೆ, ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಿದರೆ ಸಾರಿಗೆ ಇಲಾಖೆ ಮೇಲೆ ಹೆಚ್ಚಿನ ಆರ್ಥಿಕ ನಷ್ಟವಾಗುವ ಕಾರಣಕ್ಕೆ ಉಚಿತ ಬಸ್ ಬದಲು ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡಲು ಮುಂದಾಗಿದೆ ಎನ್ನಲಾಗಿದೆ.
Comments