ನೋಟು ಪ್ರಿಂಟ್ ಕುರಿತು ಹೇಳಿಕೆ ನೀಡಿದ ಬಿ.ಎಸ್.ವೈಗೆ ಖಡಕ್ ತಿರುಗೇಟು ಕೊಟ್ಟ ಸಿಎಂ ಎಚ್'ಡಿಕೆ
ಮಾಜಿ ಮುಖ್ಯಮಂತ್ರಿ ಬಿ.ಎಸ್.ವೈ ನಾನು ನೋಟು ಪ್ರಿಂಟ್ ಮಾಡುವ ಮಿಷನ್ ಇಟ್ಟುಕೊಂಡಿಲ್ಲ ಎಂದಿದ್ದರು ಈಗ ನಾನು ಅವರನ್ನು ಪ್ರಶ್ನೆ ಮಾಡುತ್ತಿರುವೆ, ನಾನು, ಪರಂ ನೋಟು ಪ್ರಿಂಟ್ ಮಷೀನ್ ಇಟ್ಟಿದ್ದೀವಾ? ಅಂತ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬಿ.ಎಸ್.ವೈ ಗೆ ತಿರುಗೇಟು ನೀಡಿದ್ದಾರೆ.
ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು ಮಂಡನೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಮಾಲೆ ಕಣ್ಣಿನವರಿಗೆ ಕಾಣುವುದೆಲ್ಲ ಹಳದಿ ಅನ್ನೊ ಮಾತು ಅವರಿಗೆ ಅನ್ವಯವಾಗುತ್ತದೆ ಅಂತ ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಘೋಷಿಸಿದ ಎಲ್ಲಾ ಬಜೆಟ್ ಗಳನ್ನು ಮುಂದುವರೆದಿದ್ದು, ಅದರ ಬಗ್ಗೆ ಯಾರು ಕೂಡ ತಪ್ಪು ಬಾವಿಸ ಬಾರದು ಅಂತ ಹೇಳಿದರು.
Comments