ಕೇಂದ್ರ ಸರ್ಕಾರದ ಉಜ್ವಲ ಯೋಜನೆ ಫಲಾನುಭವಿಗಳಿಗೆ ಉಚಿತವಾಗಿ ಗ್ಯಾಸ್ ಕಿಟ್ ವಿತರಣೆ
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿಯಲ್ಲಿ ನಗರದ ಸಿದ್ದೇನಾಯಕನ ಹಳ್ಳಿಯಲ್ಲಿರುವ ಬಡ ಎಸ್ಸಿ-ಎಸ್ಟಿ ಜನಾಂಗದ ಫಲಾನುಭವಿಗಳಿಗೆ ಮಂಜುನಾಥ ಗ್ಯಾಸ್ ಎಜೆನ್ಸಿಯವರು ಉಚಿತವಾಗಿ ಗ್ಯಾಸ್ ಪರಿಕರಗಳನ್ನು ವಿತರಣೆ ಮಾಡಿದರು. ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಚ್.ಎಸ್.ಶಿವಶಂಕರ್ ಮಾತನಾಡುತ್ತಾ ಕೇಂದ್ರ ಸರ್ಕಾರ ಬಡವರಿಗೆ ನೀಡುತ್ತಿರುವ ಯೋಜನೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಹೇಳಿದರು, ನಗರ ಬಿಜೆಪಿ ಕಾರ್ಯದರ್ಶಿಗಳಾದ ಎಂ.ಕೃಷ್ಣಮೂರ್ತಿ ಮಾತನಾಡುತ್ತಾ ಮುಂದಿನ ದಿನಗಳಲ್ಲಿ ತಾಲ್ಲೂಕಿನ ಮತ್ತು ನಗರದ ಎಲ್ಲಾ ಭಾಗಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೆ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು. ಸಿದ್ದೇನಾಯಕನ ಹಳ್ಳಿಯಲ್ಲಿರುವ ಹತ್ತು ಮಂದಿ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಿಸಲಾಯಿತು, ನಗರಸಭಾ ಮಾಜಿ ಅಧ್ಯಕ್ಷರಾದ ಮುದ್ದಪ್ಪ, ನಗರಸಭಾ ಸದಸ್ಯರಾದ ಆಂಜಿನಪ್ಪ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷರಾದ ಶಿವ, ಸಾರ್ವಜನಿಕರು ಉಪಸ್ಥಿತರಿದ್ದರು.
Comments