ಕತ್ತಲಲ್ಲಿ ವಿದ್ಯುತ್ ತಂತಿ ತಗುಲಿ ಚಾಲಕ ಸಾವು
ಪಾರ್ಕಿಂಗ್ ಮಾಡುವ ವೇಳೆ ಕತ್ತಲಲ್ಲಿ ವಿದ್ಯುತ್ ತಂತಿ ತಗುಲಿ ಚಾಲಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಎಳ್ಳುಪುರದಲ್ಲಿ ಸೋಮವಾರ ಮದ್ಯರಾತ್ರಿ ನಡೆದಿದೆ, ಕಾರ್ಖಾನೆಗೆ ಉತ್ಪನ್ನಗಳನ್ನು ತಂದಿದ್ದ ಕಾಶ್ಮೀರ ನೊಂದಣಿ ಸಂಖ್ಯೆಯ ಲಾರಿಯನ್ನು ಪಾರ್ಕ್ ಮಾಡುವ ವೇಳೆಯಲ್ಲಿ ಹಿಂಬದಿಯಲ್ಲಿದ್ದ ವಿದ್ಯುತ್ ತಂತಿ ತಗುಲಿ ಕಾಶ್ಮೀರ ಮೂಲದ ಔರಂಗಜೇಬ್ [೪೧] ಲಾರಿಯಲ್ಲೇ ಸಾವನ್ನಪ್ಪಿದ್ದಾನೆ. ಬೆಂಕಿ ಹತ್ತಿದ್ದ ಲಾರಿಯನ್ನು ಸ್ಥಳೀಯರು ನಂದಿಸಿದ್ದಾರೆಂದು ಪೋಲೀಸ್ ಮೂಲಗಳು ತಿಳಿಸಿವೆ, ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments