ನಿರುದ್ಯೋಗಿಗಳು ಹಾಗೂ ಸಿನಿಮಾ ಕಲಾವಿದರಿಗೆ ಬಂಪರ್ ಕೊಡುಗೆ ಸಿಎಂ ಎಚ್'ಡಿಕೆ..!!

ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಅನೇಕ ಮಂದಿಗೆ ಇದೀಗ ರಾಜ್ಯ ಸರ್ಕಾರದಿಂದ ಬಂಪರ್ ಆಫರ್ ಸಿಗುತ್ತಿದೆ. ಕನ್ನಡ ಸಿನಿಮಾ ರಂಗದಲ್ಲಿ ಬಹುದೊಡ್ಡ ಸಮಸ್ಯೆಗಳು ಇವೆ. ಯಾರೂ ಬಗೆಹರಿಸಲು ಮುಂದೆ ಬರುತ್ತಿಲ್ಲ ಎಂದು ಅನೇಕ ಕಲಾವಿದರು ತಮ್ಮ ಅಳಲು ತೋಡಿಕೊಂಡಿದ್ದರು. ಸದ್ಯ ನೂತನ ಸರ್ಕಾರದಿಂದ ಬಂಪರ್ ಉಡುಗೊರೆಯೊಂದು ಸಿಗುತ್ತಿದೆ. ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡ ಇಂಡಸ್ಟ್ರಿಯ ಅನೇಕ ಮಂದಿ ಈ ಕೊಡುಗೆಗೆ ಭಾಜನರಾಗಿದ್ದಾರೆ.
ಸಿನಿಮಾದಲ್ಲಿ ಕೆಲಸ ಮಾಡುತ್ತಿರುವವರಿಗೆ ಸ್ವಂತ ಮನೆ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಗರದಲ್ಲಿ ಏರ್ಪಡಿಸಿದ್ದ ಚಿತ್ರರಂಗದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು , ನಾನು ಚಿತ್ರರಂಗದಲ್ಲಿದ್ದವನು, ನನಗೂ ಇಲ್ಲಿನವರ ಸಮಸ್ಯೆಗಳು ಅರ್ಥವಾಗುತ್ತದೆ. ಕಲಾವಿದರು, ಸಹಕಲಾವಿದರು, ತಂತ್ರಜ್ಞರು, ಎದುರಿಸುತ್ತಿರುವ ಸಮಸ್ಯೆಗಳು-ಸವಾಲುಗಳು ಬಗ್ಗೆ ಪರಿಚಯವಿದೆ. ಇಂದಿಗೂ ಕೆಲ ಕಲಾವಿದರಿಗೆ ಸ್ವಂತ ಮನೆಯಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಾನು ಯೋಚಿಸಿದ್ದೇನೆ. ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ರಾಮನಗರದಲ್ಲಿ ಸುಮಾರು 500 ಎಕರೆ ಪ್ರದೇಶದಲ್ಲಿ ಫಿಲ್ಮ್ಸಿಟಿ ನಿರ್ಮಿಸುವ ಚಿಂತನೆ ಇದೆ. ಇಂತಹ ಯೋಜನೆಯಿಂದ ಎರಡು ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಬಗ್ಗೆ ನಾನು ಗಂಭೀರವಾಗಿ ಯೋಚಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ನೀಲನಕ್ಷೆ ಅಭಿವೃದ್ಧಿ ಪಡಿಸಿದರೆ ಅದಕ್ಕೆ ಬೇಕಿರುವ ಸಹಕಾರವನ್ನು ನಾನು ಕೊಡುತ್ತೇನೆ ಎಂದರು. ಈ ನೇತೃತ್ವವನ್ನು ಹಿರಿಯ ನಟ ಅಂಬರೀಶ್ ವಹಿಸಿಕೊಳ್ಳಲಿ ಎಂದರು. ಹಿಂದಿನ ಸರ್ಕಾರ ಮೈಸೂರು- ನಂಜನಗೂಡು ರಸ್ತೆಯಲ್ಲಿ ಫಿಲ್ಮ್ಸಿಟಿ ನಿರ್ಮಾಣಕ್ಕೆ 150 ಎಕರೆ ಜಮೀನು ಮೀಸಲಿಟ್ಟಿದೆ. ಅದನ್ನು ಅಭಿವೃದ್ಧಿಪಡಿಸಿಬೇಕಿದೆ ಎಂದರು. ಇನ್ನು ಸರ್ಕಾರದಿಂದ ನಿರ್ಮಾಪಕರಿಗೆ ಸಿಗಬೇಕಿರುವ ಸಬ್ಸಿಡಿ ಹಣ 40 ಕೋಟಿ ರೂ. ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.
Comments