ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೆ ನೀಡಿರುವ ಸಿದ್ದುಗೆ ತಿರುಗೇಟು ಕೊಟ್ಟ ದೇವೇಗೌಡ್ರು
ಲೋಕಸಭೆ ಚುನಾವಣೆಯ ನಂತರ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ ಎಂದ ಸಿದ್ದರಾಮಯ್ಯ ಅವರು ಆಪ್ತರ ಬಳಿ ಹೇಳಿರುವ ಮಾತಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಟಾಂಗ್ ನಿಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 'ನಾನು ಪ್ರಧಾನಿ ಆದಾಗ ಒಂದೇ ತಿಂಗಳಿಗೆ ಸರ್ಕಾರ ಬಿದ್ದು ಹೋಗುತ್ತದೆ ಎಂದಿದ್ದರು ಆದರೆ ಹಾಗಾಯಿತಾ?' ಎನ್ನುವ ಮೂಲಕ ಸಿದ್ದರಾಮಯ್ಯ ಅವರದ್ದು ಕೇವಲ ಹೊಟ್ಟೆ ಕಿಚ್ಚಿನ ಮಾತು ಅದು ಸತ್ಯವಾಗದು ಎಂದಿದ್ದಾರೆ. ಸಿದ್ದರಾಮಯ್ಯ ಅವರ ಮಾತಿಗೆ ನೇರವಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದ ದೇವೇಗೌಡರು. ರಾಜ್ಯ ರಾಜಕಾರಣದಲ್ಲಿ ಎದ್ದಿರುವ ಅಸಮಾಧಾನವನ್ನು ರಾಹುಲ್ ಗಾಂಧಿ ಅಥವಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಬಗೆಹರಿಸಲಿದ್ದಾರೆ ಎಂದರು. ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಜುಲೈ 5 ರಂದು ಬಜೆಟ್ ಮಂಡಿಸುವುದು ಶತಸಿದ್ಧ ಎಂದರು.
Comments