Big Breaking : ಕಾಂಗ್ರೆಸ್ ಹೈ ಕಮಾಂಡ್ ಗೆ ಈ ಷರತ್ತು ವಿಧಿಸಿದ ದೊಡ್ಡಗೌಡರು..!?
ತಮ್ಮ ಮಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ತಿರುಗಿಬಿದ್ದಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡರು ಹೈಕಮಾಂಡ್‍ಗೆ ದೂರು ನೀಡಿ ಮೂರು ಷರತ್ತುಗಳನ್ನು ವಿಧಿಸಿದ್ದಾರೆ ಎನ್ನಲಾಗಿದೆ.
ಹೌದು..ದಿನೇ ದಿನೇ 'ಸಿದ್ದರಾಮಯ್ಯ ವರ್ಸಸ್ ಮೈತ್ರಿ ಸರ್ಕಾರ' ಎಂಬ ಸ್ಥಿತಿ ರಾಜ್ಯ ರಾಜಕೀಯದಲ್ಲಿ ನಿರ್ಮಾಣವಾಗುತ್ತಿರುವ ಕಾರಣ ದೇವೇಗೌಡರು ಹೈಕಮಾಂಡ್ ಬಳಿ ಕೆಲವು ನಿಗದಿತ ಷರತ್ತುಗಳನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ನಾಯಕರು ಸರ್ಕಾರದಲ್ಲಿ ಹಸ್ತಕ್ಷೇಪ ಮಾಡದಂತೆ ತಡೆಯುವ ಪ್ರಯತ್ನವನ್ನೂ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ಲೋಕಸಭೆ ಚುನಾವಣೆಯ ಬಗ್ಗೆಯೂ ವಿಸ್ತೃತ ಚರ್ಚೆ ಕೂಡ ನಡೆದಿದೆ ಎನ್ನಲಾಗಿದೆ.
ದೇವೇಗೌಡರ ಷರತ್ತು ಹೀಗಿವೆ ನೋಡಿ..
ಷರತ್ತು 1 : ನಿಮಗೆ ಸಿದ್ದರಾಮಯ್ಯ ಬೇಕೋ? ಲೋಕಸಭೆ ಚುನಾವಣೆ ಬೇಕೋ? ನೀವೆ ನಿರ್ಧಾರ ಮಾಡಿ ಹೇಳಿ
ಷರತ್ತು 2 : ನಿಮ್ಮ ನಾಯಕರಿಗೂ ನಮಗೂ ಸಂಬಂಧವಿಲ್ಲ. ನಿಮ್ಮ ಪಕ್ಷದ ನಾಯಕರುಗಳನ್ನು ನೀವೇ ನಿಯಂತ್ರಣ ಮಾಡಬೇಕು.
ಷರತ್ತು 3 : ಸಮನ್ವಯ ಸಮಿತಿ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲದಕ್ಕೂ ಅನ್ವಯವಾಗಲ್ಲ. ಪ್ರಮುಖ ವಿಚಾರಗಳು ಮಾತ್ರ ಇಲ್ಲಿ ಚರ್ಚೆಯಾಗಲಿ. ಉಳಿದ ವಿಚಾರಗಳನ್ನು ಸಿಎಂ, ಡಿಸಿಎಂ ನಿರ್ಧರಿಸಬೇಕು ಅಂತ ಕಾಂಗ್ರೆಸ್ ಹೈ ಕಮಾಂಡ್ ಗೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
Comments