ಸಿಎಂ ಎಚ್’ಡಿಕೆ ಸರ್ಕಾರಕ್ಕೆ ಕಿರುಕುಳ ಕೊಟ್ರೆ ನಾವು ಸುಮ್ಮನಿರಲ್ಲ: ಮೋದಿಗೆ ನಂಜಾವದೂತ ಸ್ವಾಮೀಜಿ ಖಡಕ್ ಎಚ್ಚರಿಕೆ..!!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಕಿರುಕುಳ ಕೊಟ್ಟರೆ ನಮ್ಮ ಸಮುದಾಯದ ಶಕ್ತಿ ಏನೆಂಬುದನ್ನು ರಾಷ್ಟ್ರಮಟ್ಟದಲ್ಲೇ ತೋರಿಸುತ್ತೇವೆ ಎಂದು ಶ್ರೀ ನಂಜಾವಧೂತ ಸ್ವಾಮೀಜಿ ಮೋದಿಯವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.
ಕೆಂಪೇಗೌಡ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದಾನಂದಗೌಡರು ಕಾರ್ಯಕ್ರಮಕ್ಕೆ ಬಂದಿದ್ದರೆ ಅವರ ಮೂಲಕವೇ ಮೋದಿಗೆ ಸಂದೇಶ ರವಾನೆ ಮಾಡಬಹುದಿತ್ತು ಎಂದ ಅವರು, ಕೇಂದ್ರ ಸರ್ಕಾರ ಕುಮಾರಸ್ವಾಮಿ ಸರ್ಕಾರಕ್ಕೆ ಅನಗತ್ಯ ತೊಂದರೆ ಮಾಡಬಾರದು ಎಂದರು. ಸಮ್ಮಿಶ್ರ ಸರ್ಕಾರ ರಚನೆ ವೇಳೆ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿಯೇ ಅವರಿಗೆ ಸಮಸ್ಯೆ ಉಂಟು ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದರು. ಮೋದಿ ಕೆಂಪೇಗೌಡರನ್ನು ನಕಲು ಮಾಡಿದ್ದಾರೆ. ಕೆಂಪೇಗೌಡರು ಮೇಕ್ ಇನ್ ಕರ್ನಾಟಕ ಮಾಡಿದ್ದರು. ಅದನ್ನೇ ಈಗ ಮೋದಿ ಮೇಕ್ ಇನ್ ಇಂಡಿಯಾ ಮಾಡಿದ್ದಾರೆ ಎಂದರು.
500 ವರ್ಷಗಳ ಹಿಂದೆ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದ್ದರು. ದೇವೇಗೌಡರು ಬೆಂಗಳೂರನ್ನು ಬೆಳೆಸಿದರು, ಕ್ಲೀನ್ ಮೈಂಡ್ ರಾಜಕಾರಣಿ ಎಂದರೆ ಅದು ಕುಮಾರಸ್ವಾಮಿ. ಜಗತ್ತೇ ನಮ್ಮತ್ತ ತಿರುಗಿ ನೋಡುವಂಥ ಕ್ಷಿಪ್ರ ಕೆಲಸ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್‍ರಿಂದ ಮಾತ್ರ ಸಾಧ್ಯ ಎಂದು ಶ್ಲಾಘಿಸಿದರು. ಕುಮಾರಸ್ವಾಮಿಯವರನ್ನು ಐದು ವರ್ಷ ಮುಖ್ಯಮಂತ್ರಿಯಾಗಿ ಈ ರಾಜ್ಯದ ಜನ ನೋಡುವಂತೆ ಮಾಡುವ ಜವಾಬ್ದಾರಿ ಡಿ.ಕೆ.ಶಿವಕುಮಾರ್ ಮೇಲಿದೆ. ಅದನ್ನು ಅವರು ನಿರ್ವಹಿಸುತ್ತಾರೆ ಎಂಬ ನಂಬಿಕೆಯೂ ನಮಗಿದೆ ಎಂದು ಹೇಳಿದರು. ಕಳೆದ ಬಾರಿ ಕುಮಾರಸ್ವಾಮಿಯವರು ಸುವರ್ಣಸೌಧ ಕಟ್ಟಿದ್ದರು. ಎಸ್.ಎಂ.ಕೃಷ್ಣ ವಿಕಾಸಸೌಧ ಕಟ್ಟಿದ್ದರು. ಕೆಂಪೇಗೌಡರ ಹೆಸರಲ್ಲಿ ಕುಮಾರಸ್ವಾಮಿಯವರು ಬೃಹತ್‍ಸೌಧ ನಿರ್ಮಿಸಬೇಕು ಎಂದು ಕರೆ ನೀಡಿದರು.
Comments