ಮತ್ತೆ ಬರಲಿದೆ ಕುಮಾರಣ್ಣನ ಈ ಜನಪ್ರಿಯ ಕಾರ್ಯಕ್ರಮ..!

ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿರುವ ಎಚ್.ಡಿ.ಕುಮಾರಸ್ವಾಮಿಯವರು ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ನಡೆಸುತ್ತಿದ್ದ ಜನಪ್ರಿಯ ಕಾರ್ಯಕ್ರಮವಾದ ಗ್ರಾಮವಾಸ್ತವ್ಯವನ್ನು ಈ ಭಾರಿಯೂ ಶುರು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಹೌದು..ಈ ಮುಂಚೆ ಬಹಳ ಜನಪ್ರಿಯಗೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಹಳ ಪ್ರಶಂಸೆಗೂ ಒಳಪಟ್ಟಿತ್ತು. ಈಗಾಗಲೇ ಜನತಾ ದರ್ಶನ ಶುರು ಮಾಡಿ ಜನತೆಯ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದರ ಜೊತೆಗೆ ಗ್ರಾಮ ವಾಸ್ತವ್ಯ ಮಾಡುವುದರಿಂದ ಜನರು ತಮ್ಮ ತೊಂದರೆಗಳನ್ನು ಸುಲಭವಾಗಿ ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಂಡುಕೊಳ್ಳಬಹುದಾಗಿದೆ. ಜನತಾ ದರ್ಶನದ ಮೂಲಕ ಈಗಾಗಲೇ ಕೆಲವರಿಗೆ ವಿಧಾನಸೌಧದಲ್ಲಿಯೇ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ ಟೈಮ್ ಪಾಸ್ ಗಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಮನೆಗೆ ಕಳುಹಿಸಿ ಎಂದು ತಿಳಿಸಿದ್ದು ಸುದ್ದಿಯಾಗಿತ್ತು.
Comments