ಐಐಎಸ್ ಸಿ ಯಲ್ಲಿ ಡಾಕ್ಟರೇಟ್ ಪಡೆದ ಲಕ್ಕೂರ್ ಗುರುನಾರಾಯಣ ಸಂತೋಷ್
ದೊಡ್ಡಬಳ್ಳಾಪುರದಲ್ಲಿರುವ ದೇವಾಂಗ ಸಮಾಜದ ಶ್ರೀಮತಿ ಲಕ್ಕೂರು ಪದ್ಮ ಮತ್ತು ಲಕ್ಕೂರು ಗುರುನಾರಾಯಣ್ ರವರ ಪುತ್ರ ಶ್ರೀ ಎಲ್.ಜಿ.ಸಂತೋಷ್ ರವರು ಭಾರತ ದೇಶದ ಅಗ್ರ ಸ್ಥಾನದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ [ಐಐಎಸ್ ಸಿ] ಯಿಂದ, ದಿನಾಂಕ 25-6-2018 ಸೋಮವಾರ ನಡೆದ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿಯನ್ನು ಪಡೆದರು, ಇವರು ಪ್ರಬಂಧವನ್ನು ಪ್ರೊಫೆಸರ್ ಡಾ|| ಶಿವಕುಮಾರಬಾಬು ಜಿ.ಎಲ್. ಸಿವಿಲ್ ಇಂಜಿನಿಯರಿಂಗ್ ವಿಭಾಗ, ಐಐಎಸ್ ಸಿ, ರವರ ಮಾರ್ಗದರ್ಶನದಲ್ಲಿ ಸಿವಿಲ್ ಇಂಜಿನಿಯರಿಂಗ್ ನಲ್ಲಿ "ವೇಸ್ಟ್ ಮ್ಯಾನೇಜ್ ಮೆಂಟ್" ಬಗ್ಗೆ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿರುತ್ತಾರೆ. ಡಾಕ್ಟರೇಟ್ ಪದವಿ ಪಡೆದ ಸಂತೋಷ್ ರವರಿಗೆ ನಗರದ ದೇವಾಂಗ ಮಂಡಲಿ ಮಾಜಿ ಅಧ್ಯಕ್ಷರು ಶ್ರೀ ವಿ.ತಿಮ್ಮಶೆಟ್ಟಪ್ಪ, ವಾಣೀಜ್ಯೋದ್ಯಮಿ ಹೆಚ್.ಪಿ.ಶಂಕರ್, ಶ್ರೀ ಗಾಯತ್ರಿಪೀಠ ಮಿತ್ರ ಬಳಗ ಟ್ರಸ್ಟ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಮಾಜದ ಎಲ್ಲ ಗಣ್ಯರು ಅಭಿನಂದನೆ ತಿಳಿಸಿರುತ್ತಾರೆ
Comments