ಜುಲೈ 29-30 ರ ಭಾನುವಾರ ಮತ್ತು ಸೋಮವಾರ 11ನೇ ರಾಷ್ಟ್ರೀಯ ಗಾಳಿಪಟ ಉತ್ಸವ-2018
ಗಾಳಿಪಟ ಕಲಾ ಸಂಘ, ದೊಡ್ಡಬಳ್ಳಾಪುರ ಇವರ ವತಿಯಿಂದ ಜುಲೈ ತಿಂಗಳ 29 ರ ಭಾನುವಾರ ಮತ್ತು 30 ನೇ ಸೋಮವಾರದಂದು 11ನೇ ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಎನ್.ಮುನಿನಂಜಪ್ಪ ಲೇಔಟ್, ಭುವನೇಶ್ವರಿ ನಗರ, ದೊಡ್ಡಬಳ್ಳಾಪುರ. ಇಲ್ಲಿ ಆಯೋಜಿಸಲಾಗಿದೆ, ಆಸಕ್ತ ಸ್ಪರ್ಧಿಗಳು/ತಂಡಗಳು ಜೂನ್ ತಿಂಗಳ 30ನೇ ದಿನಾಂಕದ ಒಳಗೆ ನೊಂದಾಯಿಸಿ ಕೊಳ್ಳಬಹುದು, ಹೊರ ತಾಲ್ಲೂಕು, ಜಿಲ್ಲೆ, ರಾಜ್ಯಗಳಿಂದ ಬರುವ ಸ್ಪರ್ಧಿಗಳು / ತಂಡಗಳು ಜುಲೈ 28 ರ ರಾತ್ರಿ ಬೆಂಗಳೂರಿಗೆ ಟ್ರೈನ್ ಅಥವಾ ಬಸ್ ನಲ್ಲಿ ತಲುಪುವಂತೆ ವ್ಯವಸ್ಥೆ ಮಾಡಿಕೊಳ್ಳುವುದು, ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ಕರೆತರಲು ವ್ಯವಸ್ಥಾಪಕರು ವ್ಯವಸ್ಥೆ ಮಾಡುತ್ತಾರೆ. ಬರುವ ಗಾಳಿಪಟ ಸ್ಪರ್ಧಿಗಳಿಗೆ ವಸತಿ,ಊಟ ಮತ್ತು ಸ್ಥಳೀಯ ಸಾರಿಗೆ ವ್ಯವಸ್ಥೆಯನ್ನು ಗಾಳಿಪಟ ಕಲಾ ಸಂಘದವತಿಯಿಂದ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗೆ ಸಂದೇಶ್ ಕಡ್ಡಿ: 9448192287 ಪ್ರಕಾಶ್ ಗಾಳಿಪಟ: 9008808091 ಎಲ್.ಎಂ.ಸುಹಾಸ್: 9738111531 ಸಂಪರ್ಕಿಸುವುದು. ಅಥವಾ ನೊಂದಾಯಿಸಲು ತಮ್ಮ ವಿವರಗಳನ್ನು [email protected] ಇ-ಮೇಲ್ ಮಾಡುವುದು
Comments