ಲೋಕಸಭೆ ಚುನಾವಣೆ ಹಿನ್ನಲೆ ಬಿಜೆಪಿ ಗೆ ಸೆಡ್ಡು ಹೊಡೆಯಲು ಸುಳಿವು ಕೊಟ್ಟ ಎಚ್.ಡಿ.ದೇವೇಗೌಡ್ರು..!!

ಮುಂಬರುವ 2019 ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹಲವು ಬಾರಿ ಹೇಳಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದೀಗ ಬಿಜೆಪಿ ವಿರೋಧಿ ಪಕ್ಷಗಳ ತೃತೀಯ ರಂಗದ ನೇತೃತ್ವ ವಹಿಸಿಕೊಳ್ಳುವ ಸಾಧ್ಯತೆಯ ಸುಳಿವು ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವರು ಆಶೀರ್ವಾದ ಮಾಡಿದರೆ ತೃತೀಯ ರಂಗವನ್ನು ಮುನ್ನೆಡೆಸುವ ಅವಕಾಶ ಸಿಗುತ್ತದೆ. ಅದಕ್ಕಿನ್ನೂ ಸಮಯವಿದೆ. ಮುಂದೆ ನೋಡೋಣ ಎಂದರು. ವಿಧಾನಸಭೆ ಚುನಾವಣೆಗೆ ಮುನ್ನ ಇಡಗುಂಜಿಗೆ ಬಂದಿದ್ದೆ. ನನ್ನ ಬೇಡಿಕೆಯನ್ನು ದೇವರು ಈಡೇರಿಸಿದ್ದಾನೆ. ಹಾಗಾಗಿ ಲೋಕಸಭೆ ಚುನಾವಣೆ ಗೆಲುವಿಗಾಗಿ ಪ್ರಾರ್ಥಿಸಿದ್ದೇನೆ. ಫಲಿತಾಂಶದ ನಂತರ ಮತ್ತೆ ಬರುತ್ತೇನೆ. ನಾನು ಇಲ್ಲಿಗೆ ರಾಜಕೀಯ ಮಾಡಲು ಬಂದಿಲ್ಲ. ದೇವರ ದರ್ಶನ ಹಾಗೂ ಸ್ನೇಹಿತರ ಮನೆಯ ಮದುವೆಯಲ್ಲಿ ಪಾಲ್ಗೋಳ್ಳಲು ಬಂದಿದ್ದಾಗಿ ಹೇಳಿದರು.
Comments