ಶನಿವಾರ ಮತ್ತು ಭಾನುವಾರದಂದು ಕಿಶೋರಿಯರ ವ್ಯಕ್ತಿ ವಿಕಸನ ಕಾರ್ಯಾಗಾರ
ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರ ಕೇಂದ್ರ ಮತ್ತು ಮಕ್ಕಳ ಸಹಾಯವಾಣಿ, ಬೆಂ.ಗ್ರಾ.ಜಿಲ್ಲೆ. ಇವರು ದಿನಾಂಕ 30 ನೇ ಜೂನ್ ತಿಂಗಳ ಶನಿವಾರ ಮತ್ತು 1ನೇ ಜುಲೈ ಭಾನುವಾರದಂದು ಬೆಳಿಗ್ಗೆ 9-30 ರಿಂದ ಸಂಜೆ 5ಘಂಟೆಯವರೆಗೆ ಎರಡು ದಿನಗಳ ಕಿಶೋರಿಯಯ ವ್ಯಕ್ತಿ ವಿಕಸನ ಕಾರ್ಯಾಗಾರವನ್ನು ಹಳೇ ಬಸ್ ನಿಲ್ದಾಣದಲ್ಲಿರುವ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದಾರೆ, ಉದ್ಘಾಟನಾ ಕಾರ್ಯಕ್ರಮ ಶನಿವಾರದಂದು ಬೆಳಿಗ್ಗೆ 10-15 ಕ್ಕೆ ಶ್ರೀ ಸುನಿಲ್ ಎಸ್. ಹೊಸಮನಿ, ಹಿರಿಯ ಸಿವಿಲ್ ನ್ಯಾಯಾಧೀಶರು ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಕಾರ್ಯಾಗಾರ, ಬೆಂ.ಗ್ರಾ. ಜಿಲ್ಲೆ. ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಾ.ಬೇಬಿ ವಾಲೇಕರ್, ಸಬ್ ಇನ್ಸ್ ಪೆಕ್ಟರ್, ಜಿಲ್ಲಾ ಮಹಿಳಾ ಪೋಲೀಸ್ ಠಾಣೆ, ಇವರು ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀಮತಿ ಜಯಲಕ್ಷ್ಮಿ, ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ, ದೊ. ಶ್ರೀಮತಿ ಅಮಲಿ ನಾಯ್ಕ, ಕಾರ್ಯದರ್ಶಿ, ಗ್ರಾ.ಅ.ಸೇ.ಸಂಸ್ಥೆ. ಆಗಮಿಸಲಿದಾರೆ, ಆಶಯ ಭಾಷಣವನ್ನು ಶ್ರೀಮತಿ ಕೆ.ಎಸ್.ಪ್ರಭ, ಅಧ್ಯಕ್ಷರು. ಮಹಿಳಾ ಸಮಾಜ, ದೊ. ಮಾಡಲಿದ್ದಾರೆ.
ಮೊದಲನೆ ಗೋಷ್ಠಿಯ ವಿಷಯ ಜೀವನದ ಆರಂಭ ಕುರಿತು ಡಾ. ಆರ್.ಇಂದಿರ, ಸ್ತ್ರೀ ರೋಗ ತಜ್ಞರು ಹಾಗೂ ಮಾದ್ಯಮ ಮತ್ತು ಹದಿ ಹರೆಯ ಕುರಿತು ಡಾ.ಪೂರ್ಣಿಮಾ, ಹಿರಿಯ ಪತ್ರಕರ್ತರು, ಲೇಖಕಿ ಮಾತನಾಡಲಿದ್ದಾರೆ. ಎರಡನೇ ಗೋಷ್ಠಿ ಮದ್ಯಾನ್ಹ ಎರಡು ಘಂಟೆಗೆ ಸೆಲ್ಫೀ ಸಂಸ್ಕೃತಿ ಮತ್ತು ಯುವ ಜನತೆ ಕುರಿತು ಡಾ.ಎನ್.ಗಾಯತ್ರಿ, ಸಹ ಸಂಪಾದಕರು, ಹೊಸತು ಮಾಸ ಪತ್ರಿಕೆ ಮಾತನಾಡಲಿದ್ದಾರೆ, ಮಾಧ್ಯಮ ಮತ್ತು ಮೌಡ್ಯದ ಬಗ್ಗೆ ಡಾ.ನಾ. ಸೋಮೇಶ್ವರ ವೈದ್ಯರು ಮತ್ತು ಲೇಖಕರು ಮಾತನಾಡಲಿದ್ದಾರೆ.
ಮೂರನೇ ಗೋಷ್ಠಿ ಭಾನುವಾರ ಬೆಳಿಗ್ಗೆ 9-30 ಕ್ಕೆ ಹದಿ ವಯಸ್ಸಿನಲ್ಲಿ ಅಪರಾಧಗಳ ಕುರಿತು ಶ್ರೀ B.K.ಪಾಟಿಲ್,ಸಬ್ ಇನ್ಸ್ ಪೆಕ್ಟರ್, ದೊ. ಮಾತನಾಡಿದರೆ, ಶ್ರೀ ಶ್ರೀನಿವಾಸ ಅರ್ಕ, ತತ್ವಜ್ಞಾನಿಗಳು, ಮೈಸೂರು. ಹದಿ ಹರೆಯದ ಮನಸ್ಸು ಮತ್ತು ಹಿರಿಯರ ಹೊಣೆಗಾರಿಕೆ ಕುರಿತು ಗೋಷ್ಠಿ ನಡೆಸಲಿದ್ದಾರೆ. ಮದ್ಯಾನ್ಹ 2 ಘಂಟೆಗೆ ಕಾನೂನು ಅರಿವು ಕುರಿತು ಶ್ರೀಮತಿ ಟಿ.ಕೆ ಶ್ರೀದೇವಿ, ಪ್ರಾಂಶುಪಾಲರು, ಅರುಣೋದಯ ಕಾನೂನು ಕಾಲೇಜು, ಬೆಂ. ನೆಡೆಸಿಕೊಡಲಿದ್ದಾರೆ, ಮಕ್ಕಳ ಸಹಾಯ ವಾಣಿ ಕುರಿತಂತೆ ಶ್ರೀ ರಾಮು ಜೋಗಿಹಳ್ಳಿ ನಡೆಸಿಕೊಡಲಿದ್ದಾರೆ.
Comments