ರಾಜಕಾರಣಿಗಳ ಹಿಂದೆ ಸುತ್ತುವ ಗುರುಗಳಿಗೆ ಖಡಕ್ ವಾರ್ನಿಂಗ್ ಕೊಟ್ಟ ಉನ್ನತ ಶಿಕ್ಷಣ ಸಚಿವ ಜಿಟಿಡಿ

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಮಹಾರಾಣಿ ಕಾಲೇಜಿನಲ್ಲಿ ನಡೆಯುತ್ತಿರುವ ಎನ್‌ಇಸಿ ಸಭೆಯಲ್ಲಿ ರಾಜಕಾರಣಿಗಳ ಹಿಂದೆ ಸುತ್ತಿದರೆ ಗುರುಗಳಿಗೆ ಗೌರವ ಸಿಗುವುದಿಲ್ಲ ಅಂತ ಹೇಳಿ, ಈ ಮೂಲಕ ಶಿಕ್ಷಣ ವೃತ್ತಿಯನ್ನು ಹೊರತು ಪಡಿಸಿ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವ ಶಿಕ್ಷಕ ವರ್ಗಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಅವರು ಮಾತನಾಡಿದ ಅವರು, ಈಗ ಶಿಕ್ಷಕರಿಗೆ ಎಲ್ಲ ಸೌಲಭ್ಯಗಳು ಸಿಕ್ಕಿ ಹಲವು ಸೌಲಭ್ಯಗಳನ್ನ ಕೇಳಿದ್ದಾರೆ. ಖಾಸಗಿ ಕಾಲೇಜುಗಳಿಗಿಂತ ಹೆಚ್ಚು ವೇತನ ನೀಡಿದ್ದೇವೆ. ಖಾಸಗಿ ಕಾಲೇಜು ಉಪನ್ಯಾಸಕರಿಗೆ ಪಿಂಚಣಿ ಇಲ್ಲ, ಸರಕಾರಿ ಕಾಲೇಜುಗಳಿಗೆ ಈಗಾಗಲೇ ಉತ್ತಮ ಸೌಲಭ್ಯ ನೀಡಲಾಗಿದೆ ಅಂತ ಹೇಳಿದರು.
Comments