ಶಾಸಕ ಟಿ.ವೆಂಕಟರಮಣಯ್ಯನವರಿಗೆ ಅಬಿನಂಧನಾ ಸಮಾರಂಭ 14/15/16 ವಾರ್ಡ್ ಕಾರ್ಯಕರ್ತರಿಂದ
ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಇಂದು ಸಂಜೆ 6 ಘಂಟೆಗೆ ತೂಬಗೆರೆಪೇಟೆ ಸರ್ಕಲ್ ಬಳಿ ಆಗಮಿಸಿ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿದ್ದಕ್ಕಾಗಿ ಮೂರೂ ವಾರ್ಡ್ ನ ಮತದಾರರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು, ನಗರ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಯೋಗ ನಟರಾಜ್ ಸ್ವಾಗತಕೋರುತ್ತಾ ಮಾತನಾಡಿ ಕಳೆದ ಐದು ವರ್ಷಗಳಲ್ಲಿ 15ನೇ ವಾರ್ಡ್ ಗೆ ಅತಿಹೆಚ್ಚು ಅನುದಾನ ನೀಡಿದ್ದಕ್ಕಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು. ಶಾಸಕರು ಮಾತನಾಡುತ್ತಾ ಮುಂದಿನ ದಿನಗಳಲ್ಲಿ ಸಾಮಾನ್ಯ ನಾಗರೀಕರಿಗೆ ಅನುಕೂಲವಾಗುವಂತೆ ಪ್ರತೀ ಬುಧವಾರದಂದು ನಗರಸಭೆಯ ಕಾರ್ಯಾಲಯದಲ್ಲಿ ಸಿಗುತ್ತೇನೆ, ತಮ್ಮ ಕುಂದು ಕೊರತೆ ಏನೇ ಇದ್ದರೂ ಅಲ್ಲಿ ಬಂದು ತಿಳಿಸಲು ಕೋರಿದರು. ನಗರ ಬ್ಲಾಕ್ ಅಧ್ಯಕ್ಷ ಕೆ.ಜಿ.ಅಶೋಕ್ ಮಾತನಾಡಿ ನಗರದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮತ ನೀಡಿದ್ದಕ್ಕಾಗಿ ಧನ್ಯನಾದ ಹೇಳಿದರು, ನಗರಸಭಾ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್, ಎಲ್.ಸಿ.ದೇವಕಿ, ಶೀಲಾ ಲಕ್ಷ್ಮೀನಾರಾಯಣ್, ನಿರ್ಮಲಾ, ಹೇಮಂತರಾಜುರೊಂದಿಗೆ ಹಲವಾರು ಕಾಂಗ್ರೆಸ್ ಪಕ್ಷದ ಮುಖಂಡರು, ಮೂರೂ ವಾರ್ಡಿನ ಮತದಾರರು ಮತ್ತು ಸಾರ್ವಜನಿಕರು ಹಾಜರಿದ್ದರು.
Comments