ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಉಡುಗೊರೆ ಕೊಟ್ಟ ಸಿಎಂ ಎಚ್’ಡಿಕೆ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಡಿಎಸ್ ಹಾಗು ಕಾಂಗ್ರೆಸ್ ಸಮ್ಮಿಶ್ರ ಎಚ್.ಡಿ ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಗಿಫ್ಟ್ ಕೊಡಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ .
ರಾಜ್ಯ ಸರ್ಕಾರಿ ನೌಕರರಿಗೆ ಮುಂಬರುವ ಜುಲೈ ತಿಂಗಳಿಂದಲೇ ಶೇ.30ರಷ್ಟು ಸಂಬಳ ಹೆಚ್ಚಿಗೆ ಮಾಡಲು ಅನುಮತಿ ನೀಡಿದೆ. ಸಂಬಳ ಹೆಚ್ಚಳಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ, ಹಾಗು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದ ಸರ್ಕಾರಿ ನೌಕರರು ಇದರ ಲಾಭವನ್ನು ಪಡೆಯಲಿದ್ದಾರೆ. ಇದರ ಲಾಭವನ್ನು ಸರಿ ಸುಮಾರು 5.93 ಲಕ್ಷ ಸರ್ಕಾರಿ ನೌಕರರು ಪಡೆಯಲಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
Comments