Big Breaking : ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಬಹುತೇಕ ಫೈನಲ್..!? ಯಾರಿಗೆ ಯಾವ ಜಿಲ್ಲೆ..!? ಪಟ್ಟಿ ಪ್ರಕಟ..!

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು ತಿಂಗಳ ಬಳಿಕ ಸಚಿವ ಸಂಪುಟದ ಸದಸ್ಯರುಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು ಎಂಬ ಕುತೂಹಲಕ್ಕೆ ತೆರೆ ಎಳೆಯಲಾಗಿದೆ.
ಬೆಂಗಳೂರು ನಗರ-ಡಾ.ಪರಮೇಶ್ವರ್ ಜಮೀರ್ ಅಹ್ಮದ್‌ಗೆ-ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ-ಶಿವಶಂಕರ ರೆಡ್ಡಿ, ಕೋಲಾರ-ಕೃಷ್ಣ ಬೈರೇಗೌಡ, ಮೈಸೂರು-ಜಿ.ಟಿ.ದೇವೇಗೌಡ, ಮಂಡ್ಯ-ಪುಟ್ಟರಾಜುಗೆ, ಶಿವಮೊಗ್ಗ-ಡಿ.ಸಿ.ತಮ್ಮಣ್ಣ, ಬೆಳಗಾವಿ- ರಮೇಶ್ ಜಾರಕಿಹೊಳಿ, ಧಾರವಾಡ -ಪ್ರಿಯಾಂಕ್ ಖರ್ಗೆ, ಹಾವೇರಿ-ಆರ್.ಶಂಕರ್, ಕೊಪ್ಪಳ-ಬಂಡೆಪ್ಪ ಕಾಶಂಪೂರ್, ರಾಯಚೂರು-ವೆಂಕಟರಾವ್ ನಾಡಗೌಡ, ಬಾಗಲಕೋಟೆ-ಎಂ.ಸಿ.ಮನಗೂಳಿ, ಹಾಸನ-ಎಚ್.ಡಿ.ರೇವಣ್ಣ, ತುಮಕೂರು-ಶ್ರೀನಿವಾಸ್,ಚಿತ್ರದುರ್ಗ-ವೆಂಕಟರಮಣಪ್ಪ, ಚಾಮರಾಜನಗರ-ಪುಟ್ಟರಂಗಶೆಟ್ಟಿ, ಕೊಡಗು-ಕೆ.ಜೆ.ಜಾರ್ಜ್, ದಕ್ಷಿಣ ಕನ್ನಡ ಜಿಲ್ಲಾ ಯು.ಟಿ.ಖಾದರ್, ಉಡುಪಿ-ಜಯಮಾಲಾ, ಚಿಕ್ಕಮಗಳೂರು-ಸಾ.ರಾ.ಮಹೇಶ್, ಬೀದರ್-ರಾಜಶೇಖರ ಪಾಟೀಲ್, ವಿಜಯಪುರ-ಶಿವಾನಂದ ಪಾಟೀಲ್, ರಾಮನಗರ ಉಸ್ತುವಾರಿ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಸಿಎಂ ಕುಮಾರಸ್ವಾಮಿಯವರೇ ರಾಮನಗರ ಉಸ್ತುವಾರಿ ಇಟ್ಟುಕೊಳ್ತಾರಾ? ಅಥವಾ ಡಿ.ಕೆ.ಶಿವಕುಮಾರ್ ಅವರಿಗೆ ರಾಮನಗರ ಉಸ್ತುವಾರಿ ಬಿಟ್ಟು ಕೊಡ್ತಾರಾ? ಎಂದು ಕಾದು ನೋಡಬೇಕು.. ಉಳಿದಂತೆ ಎಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಸೋಮವಾರದೊಳಗೆ ಪ್ರಕಟವಾಗಲಿದೆ ಎಂದು ಮೂಲಗಳು ತಿಳಿಸಿವೆ..
Comments