ಪರಿಸರ ಪ್ರೇಮಿ ವಾಕಿಂಗ್-26 ತಂಡದಿಂದ ಗಿಡನೆಡುವ ಕಾರ್ಯಕ್ರಮ
ನಗರದ ಸೋಮೇಶ್ವರ ಬಡಾವಣೆಯ ಸುತ್ತಮುತ್ತ ವಾಸವಾಗಿರುವ ಸಮಾನ ಮನಸ್ಕ ಸ್ನೇಹಿತರು ಪ್ರತಿದಿನ ದೊಡ್ದಮ್ಮ ದೇವಸ್ಥಾನದ ಹತ್ತಿರ ವಾಕಿಂಗ್ ಹೋಗುತ್ತಾರೆ, ಜೊತೆಯಲ್ಲೇ ಎಲ್ಲರೂ ಕೂಡಿ ಹಲವಾರು ಸಮಾಜಮುಖಿ ಕೆಲಸಗಳಲ್ಲೂ ತೊಡಗುತ್ತಾರೆ, ಇಂದು ಪರಿಸರ ಉಳಿಸುವ ಸಲುವಾಗಿ ತಾಲ್ಲೂಕು ಕಛೇರಿ ಹಿಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಮಾರ್ಗದರ್ಶನದೊಂದಿಗೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಗಿಡಗಳನ್ನು ನೆಟ್ಟು ತಮ್ಮ ಪರಿಸರ ಪ್ರೀತಿಯನ್ನು ತೋರಿದ್ದಾರೆ. ಶಾಲಾ ಮುಖ್ಯೋಪಾದ್ಯಾಯ ಎಂ.ಎಸ್. ರಾಜಶೇಖರ್ ಮಾತನಾಡಿ ವಾಕಿಂಗ್ ತಂಡಕ್ಕೆ ಅಭಿನಂದಿಸಿದರು ಹಾಗೂ ವಿದ್ಯಾರ್ಥಿಗಳೂ ಪರಿಸರ ಕುರಿತು ಕಾಳಜಿ ವಹಿಸಲು ಹೇಳಿದರು. ನಗರಸಭಾ ಸದಸ್ಯ ವಿ.ಎಸ್.ರವಿಕುಮಾರ್, ಕೆ.ವಿ.ಗೋಪಾಲ್, ಮುತ್ತಣ್ಣ, ರಮೇಶ್, ಪದ್ಮನಾಭ್, ಗುರುಶಂಕರ್, ನಿರಂಜನ್, ಡಿಪಿಎ ಅಧ್ಯಕ್ಷ ರವಿಕುಮಾರ್, ಕೇಶವರೊಂದಿಗೆ ಮಾಜಿ ನಗರಸಭಾ ಸದಸ್ಯ ಮಹದೇವ್ ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.
Comments