ರಾಮನಗರ ಉಪಚುನಾವಣೆ : ಕುತೂಹಲ ಕೆರಳಿಸಿದ ಇವರ ನಡೆ..!ಜೆಡಿಎಸ್ ನಿಂದ ಕಣಕ್ಕಿಳಿಯಲಿರುವ ಈ ಸ್ಪರ್ಧಿ..!!
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜಿನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಯಾರು ಎಂಬ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದು, ಆದರೆ ಇದೀಗ ಅನಿತಾ ಕುಮಾರಸ್ವಾಮಿ ಅವರ ಈ ಹೊಸ ನಡೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಸಿಎಂ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಕೆಲವು ದಿನಗಳಿಂದ ಸಕ್ರೀಯರಾಗಿದ್ದು ಜೆಡಿಎಸ್ ಟಿಕೆಟ್ ಅವರಿಗೇ ಸಿಗಲಿದೆಯಾ ಎಂಬ ಊಹಾಪೋಹ ಹರಿದಾಡುತ್ತಿದೆ. ನಿನ್ನೆಯಷ್ಟೆ ಅನಿತಾ ಕುಮಾರಸ್ವಾಮಿ ಅವರು ರಾಮನಗರದ ಕುರುಬರಹಳ್ಳಿಯ ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿದ್ದು, ಸ್ಥಳೀಯ ರಾಜಕೀಯ ಮುಖಂಡರು ಮತ್ತು ಜನರೊಂದಿಗೆ ಬೆರೆತಿದ್ದಾರೆ. ರಾಮನಗರದ ಹಲವು ಜೆಡಿಎಸ್ ಮುಖಂಡರನ್ನೂ ಅನಿತಾ ಕುಮಾರಸ್ವಾಮಿ ಅವರು ಭೇಟಿಯಾಗಿದ್ದಾರೆ ಎನ್ನಲಾಗಿದ್ದು, ಚುನಾವಣೆ ಕುರಿತು ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ರಾಮನಗರದಿಂದ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವೂ ಇತ್ತು. ಅಲ್ಲದೆ ಸ್ಥಳೀಯ ಕೆಲವು ಮುಖಂಡರ ಹೆಸರುಗಳೂ ಕೇಳಿಬಂದಿತ್ತು. ಜೊತೆಗೆ ಕಡೂರಿನಲ್ಲಿ ಸೋತಿರುವ ವೈ.ಎಸ್.ವಿ ದತ್ತ ಅವರಿಗೆ ರಾಮನಗರ ಟಿಕೆಟ್ ನೀಡಬೇಕೆಂಬ ಕೂಗು ಸಹ ಇದೆ. ಆದರೆ ಹೊಸ ಬೆಳವಣಿಗೆ ಗಮನಿಸಿದರೆ ಅನಿತಾ ಕುಮಾರಸ್ವಾಮಿ ಅವರಿಗೆ ರಾಮನಗರ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Comments