ಶಿಕ್ಷಣ ಇಲಾಖೆಗೆ ಸಲಹೆಗಾರ ಯಾಕೆ ಎಂದಿದ್ದಕ್ಕೆ ತಿರುಗೇಟು ಕೊಟ್ಟ ಉನ್ನತ ಶಿಕ್ಷಣ ಸಚಿವ ಜಿಟಿಡಿ

ಕೊನೆಗೂ ಮುನಿಸು ಮರೆತು ವಿಧಾನಸೌಧದ ತಮ್ಮ ಕಚೇರಿಗೆ ಪೂಜೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿದ ಅವರು, ಸಚಿವರಿಗೆ ಉನ್ನತ ಶಿಕ್ಷಣ ಇಲಾಖೆಗೆ ಸಲಹೆಗಾರರಾಗಿ ಪ್ರೊ. ರಂಗಪ್ಪ ಅವರನ್ನು ನೇಮಿಸಿರುವ ಬಗ್ಗೆ ತಿರುಗೇಟು ನೀಡಿದ್ದಾರೆ.
ನಾನು ಯಾರನ್ನೂ ಸಲಹೆಗಾರರಾಗಿ ಕೊಡಿ ಎಂದು ಕೇಳಿರಲಿಲ್ಲ. ಆದರೆ ಉನ್ನತ ಶಿಕ್ಷಣ ಇಲಾಖೆ ಎನ್ನುವುದು ಮಹತ್ವದ ಇಲಾಖೆ. ಇಲ್ಲಿ ಹಲವು ತಜ್ಞರ ಸಲಹೆಗಳು ಅಗತ್ಯ. ಯಾರೂ ಕೂಡಾ ಸಂಪೂರ್ಣವಾಗಿ ತಜ್ಞರಲ್ಲ. ಎಲ್ಲರ ಸಲಹೆ, ಸಹಕಾರದಿಂದಲೇ ಈ ಇಲಾಖೆ ನಡೆಸಲು ಸಾಧ್ಯ ಎಂದು ಜಿ.ಟಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
Comments