ಸಾಲಮನ್ನಾಕ್ಕಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಸಿದ್ದುಗೆ ಬಿಗ್ ಶಾಕ್ ಕೊಟ್ಟ ಸಿಎಂ ಎಚ್'ಡಿಕೆ
ರೈತರ ಸಾಲಮನ್ನಾ ಮಾಡುವ ಮಹತ್ವಾಕಾಂಕ್ಷಿ ತೀರ್ಮಾನಕ್ಕಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇದೀಗ ಅನುದಾನ ಕಡಿತ ಸೂತ್ರ ಹೆಣೆದಿದ್ದು, ಈ ಹಿಂದೆ ಸಿದ್ದರಾಮಯ್ಯ ತಮ್ಮ ಬಜೆಟ್ ನಲ್ಲಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ್ದ ಶೇಕಡ 20 ರಷ್ಟು ಅನುದಾನವನ್ನು ಕಡಿತ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಮೈತ್ರಿ ಸರ್ಕಾರದ ಸಾಮನ್ಯ ಕನಿಷ್ಠ ಕಾರ್ಯಕ್ರಮ ಅನುಷ್ಠಾನಕ್ಕೆ ಇನ್ನೂ ಐದು ವರ್ಷಗಳ ಕಾಲಾವಕಾಶ ಸಿಗುವ ನಿರೀಕ್ಷೆಯಲ್ಲಿ ರೈತರ ಸಾಲ ಮನ್ನಾ ಮಾಡುವುದು ಪರಿಷ್ಕೃತ ಬಜೆಟ್ ನ ಆದ್ಯತೆಯಾಗಿದೆ. ಪ್ರಸಕ್ತ ಆರ್ಥಿಕ ಸಾಲಿನ ಉಳಿದ ಎಂಟು ತಿಂಗಳ ಅವಧಿಗೆ ಆಗಸ್ಟ್ ನಿಂದ ಜಾರಿಯಾಗಲಿರುವ ಈ ಬಜೆಟ್ ನಲ್ಲಿ ನಾನಾ ಇಲಾಖೆಗಳ ನಿಗದಿತ ಅನುದಾನದಲ್ಲಿ ಶೇ. 20 ಕಡಿತದ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.
ಅಭಿವೃದ್ಧಿ ಯೋಜನೆಗಳಿಗೆ ತೊಡಕಾಗುವುದನ್ನು ತಪ್ಪಿಸಲು ಚುನಾವಣಾ ಪೂರ್ವ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದ ಕೆಲವು ಹೊಸ ಯೋಜನೆಗಳನ್ನು ಕೈಬಿಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪ್ರತಿ ಇಲಾಖೆಯ ಸಚಿವರು ಹಾಗೂ ಮುಖ್ಯಸ್ಥರಿಗೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಖಡಕ್ ಸೂಚನೆ ರವಾನಿಸಿದ್ದು, ಸಿದ್ದರಾಮಯ್ಯ ಕೊಟ್ಟಿದ್ದ ಅನುದಾನದಲ್ಲಿ 20% ಇಲಾಖೆ ಕಡಿತ ಮಾಡಿ ಉಳಿದ ಅನುದಾನ ಮಿತಿಯೊಳಗೆ ಯೋಜನೆಗಳು ಪ್ಲಾನ್ ಸಿದ್ದಪಡಿಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
Comments