ವಿದ್ಯಾರ್ಥಿಗಳ ಜೊತೆ ಜೊತೆಗೆ ಪ್ರಯಾಣಿಕರಿಗೂ ಬಂಪರ್ ಗಿಫ್ಟ್ ಘೋಷಿಸಿದ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ

21 Jun 2018 3:28 PM |
29202 Report

ಹಿಂದಿನ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಲು ಬಜೆಟ್ ನಲ್ಲಿ ಘೋಷಣೆ ಮಾಡಿತ್ತು, ಇದೀಗ ಅಧಿಕೃತವಾಗಿ ಹೇಳಿಕೆ ನೀಡಿರುವಂತ ನೂತನ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಲು ಸರಕಾರವು ತೀರ್ಮಾನಿಸಿದೆ ಎಂಬುದಾಗಿ ತಿಳಿಸಿದ್ದಾರೆ.

ಈ ಯೋಜನೆಯ ಲಾಭವನ್ನು ಸುಮಾರು 19.6 ಲಕ್ಷ ವಿದ್ಯಾರ್ಥಿಗಳು ಪಡೆಯಲಿದ್ದಾರೆ, ಶೀಘ್ರದಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಈ ಯೋಜನೆಯ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.ಈ ಯೋಜನೆಯಿಂದ ಇಲಾಖೆಗೆ 620 ಕೋಟಿ ರೂ. ಗಳಷ್ಟು ಹೊರೆ ಆಗಲಿದೆ. ಶೇ 25 ರಷ್ಟನ್ನು ಸಾರಿಗೆ ಇಲಾಖೆ ಭರಿಸುತ್ತದೆ. ಇದೆ ಸಂದರ್ಭದಲ್ಲಿ ಬಸ್ ಪ್ರಯಾಣದರದ ಬಗ್ಗೆ ಮಾತನಾಡಿದರು ರಾಜ್ಯದಲ್ಲಿ ಸದ್ಯಕ್ಕೆ ಬಸ್‌ ದರ ಏರಿಕೆ ಮಾಡುವುದಿಲ್ಲ, ರಾಜ್ಯ ಸಾರಿಗೆ ಇಲಾಖೆಗೆ ರಾಷ್ಟ್ರ ಮಟ್ಟದಲ್ಲಿ ಹೆಗ್ಗಳಿಕೆ ಇದೆ. ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸುವ ಬಗ್ಗೆ ಚಿಂತನೆ ಮಾಡಲಾಗುತ್ತದೆ ಎಂಬುದಾಗಿ ತಿಳಿಸಿದರು.

Edited By

Shruthi G

Reported By

hdk fans

Comments