ಯಶಸ್ವಿ ವಿಶ್ವ ಯೋಗ ದಿನಾಚರಣೆ
ಇಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ವಿಶ್ವ ಯೋಗದಿನಚರಣಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಯೋಗ ದಿನವನ್ನು, ಯೋಗಾಭ್ಯಾಸ ಮಾಡುವುದರ ಮೂಲಕ ಆಚರಿಸಲಾಯಿತು. ತಪಸಿಹಳ್ಳಿ ಆಶ್ರಮದ ಪೂಜ್ಯ ಗುರುಗಳಾದ ಶ್ರೀ ಶ್ರೀ ಶ್ರೀ ದಿವ್ಯಜ್ಞಾನಂದಗಿರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಕ್ರೀಡಾಂಗಣದಲ್ಲಿ ಸೇರಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಯೋಗ ಪಟುಗಳು ಯೋಗ ಮಾಡುವುದರ ಮೂಲಕ ಆಚರಣೆ ಮಾಡಿದರು. ಟ್ರಸ್ಟ್ ಕಾರ್ಯದರ್ಶಿ ಲೋಕೇಶಮೂರ್ತಿ ಸ್ವಾಗತಿಸಿದರು, ಖಜಾಂಚಿ ಶ್ರೀನಿವಾಸ್ ನಿರೂಪಣೆ ಮಾಡಿದರು, ಅಧ್ಯಕಾರಾದ ಹನುಮಂತರಾಯಪ್ಪನವರು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರ ಖ್ಯಾತಿ ಪಡೆದ ಯೋಗಪಟುಗಳಾದ ಗಾನಶ್ರೀ, ದಿವ್ಯಶ್ರೀ ಮತ್ತು ವಿನುತಾ ಗೌಡರನ್ನು ಸನ್ಮಾನಿಸಲಾಯಿತು, ಟ್ರಸ್ಟ್ ನ ಎಲ್ಲಾ ಪದಾಧಿಕಾರಿಗಳು, ನಗರದ ವಿವಿಧ ಯೋಗ ಕೇಂದ್ರದ ಯೋಗಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Comments