ದಿನೇಶನಿಗೆ ಕೈ ಕೊಟ್ಟು ಭಾಸ್ಕರನ ಕೈ ಹಿಡಿದ ಹೇಮಾವತಿ!





ಕೈಗೆ ಕೈಕೊಟ್ಟು ತೆನೆ ಹೊತ್ತ ಹೇಮಾವತಿ! ನೋಟಾ ಪಾಲಾದ ಏಳು ಮತಗಳು! ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಎ.ಭಾಸ್ಕರ್ 593 ಮತಗಳನ್ನು ಪಡೆದು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಕೆ.ಜಿ.ದಿನೇಶ್ ರನ್ನು 115 ಮತಗಳ ಅಂತರದಿಂದ ಸೋಲಿಸಿದ್ದಾರೆ, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಮರು ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಬಂಡಾಯವಾಗಿ ನಿಂತಿದ್ದ ನಾಗರಾಜು ಕೇವಲ 38 ಮತಗಳನ್ನು ಪಡೆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಶ್ರೀಮತಿ ಕೋಮಲ 49 ಮತಗಳನ್ನು ಪಡೆದಿದ್ದಾರೆ, ಪೈಪೋಟಿ ನೀಡಿ ಸೋತ ದಿನೇಶ 478 ಮತಗಳನ್ನು ಪಡೆಯುವಲ್ಲಿ ಸಫಲರಾದರು. ಕೈವಶವಾಗಿದ್ದ ಹೇಮಾವತಿ ಮರು ಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆಯಾದಳು.
Comments