ನಮ್ಮ ದೇಶದಲ್ಲಿ ಆಚರಣೆಗಳು ವಿಶಿಷ್ಟವಾಗಿವೆ : ಎಂ.ಜಿ ಸುಧೀರ್







ಕೊರಟಗೆರೆ ಜೂ. 19:-ಜಾತ್ಯಾತೀತ ಕಲ್ಪನೆಯಡಿಯಲ್ಲಿ ನಮ್ಮ ದೇಶವಿದ್ದು ಇಲ್ಲಿರುವಂತಹ ವೈಶಿಷ್ಟಗಳು ಬೇರಾವ ದೇಶದಲಿಲ್ಲ ಎಂದು ಪಟ್ಟಣದ ಕನ್ನಿಕಾ ವಿದ್ಯಾಪೀಠ ಸಂಸ್ಥೆಯ ಅಧ್ಯಕ್ಷ ಎಂ.ಜಿ ಸುಧೀರ್ ತಿಳಿಸಿದರು. ಮಂಗಳವಾರ ಶಾಲೆಯಲ್ಲಿ ‘ಏತ್ನಿಕ್ ಡೇ’ ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಲವು ಜಾತಿ, ಧರ್ಮ, ರೀತಿ, ನೀತಿ, ಉಡುಗೆ ತೊಡುಗೆಯಲ್ಲಿ ವಿಭಿನ್ನವಾಗಿದ್ದೇವೆ ಆದರೆ ಎಲ್ಲರೂ ಒಂದೇ ಎನ್ನುವ ಕಲ್ಪನೆ ಮತ್ತು ಭಾತೃತ್ವದಲ್ಲಿ ಭಾರತವನ್ನು ಮೀರಿಸುವಂತಹ, ಭಾರತಕ್ಕೆ ಸರಿಸಮನಾಗಿ ನಿಲ್ಲುವಂತಹ ದೇಶ ಮತ್ತೊಂದಿಲ್ಲ ಎಂದರು.
ಹಲವರ ತ್ಯಾಗ ಬಲಿಧಾನದಿಂದ ನಿರ್ಮಾಣವಾಗಿರುವವಂತಹ ದೇಶ ನಮ್ಮದು ಇಲ್ಲಿ ಯಾವುದೇ ದ್ವೇಶಕ್ಕೆ ಅವಕಾಶವಿಲ್ಲ… ಇಂತಹ ದೇಶದಲ್ಲಿ ನಾವು ಇರುವುದೇ ನಮ್ಮೆಲ್ಲರ ಪುಣ್ಯ ಎಂದು ಕನ್ನಿಕಾ ವಿದ್ಯಾಪೀಠ ಸಂಸ್ಥೆಯ ಕಾರ್ಯದರ್ಶಿ ಕೆಎಸ್ ವಿ ರಘ ಹೇಳಿದರು.
ಶಾಲೆಯ ಮುಖ್ಯ ಶಿಕ್ಷಕ ಡಿ.ಎಂ ರಾಘವೇಂದ್ರ ಮಾತನಾಡಿ ಮಕ್ಕಳಿಗೆ ಕೇವಲ ಪಠ್ಯದಲ್ಲಿರುವಂತಹ ಪಾಠಕಷ್ಟೇ ಸೀಮಿತಮಾಡದೇ ಪ್ರತಿಯೊಂದು ಆಚರಣೆ ಮತ್ತು ಪ್ರತಿಯೊಂದು ಮೌಲ್ಯವನ್ನು ತಿಳಿಸುವಂತಹ ಶಿಕ್ಷಣಕ್ಕೆ ಆಧ್ಯತೆಯನ್ನು ನೀಡಬೇಕಿದೆ. ತರಗತಿಯ ಒಳಗಿನ ಶಿಕ್ಷಣಕ್ಕಿಂತ ಪ್ರಾಯೋಗಿಕ ತರಗತಿಯಲ್ಲಿ ಮಕ್ಕಳು ಹೆಚ್ಚಿನ ಕಲಿಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು ಹಲವು ಸಂಸ್ಕೃತಿಯನ್ನು ಸೂಚಿಸುವಂತಹ ಉಡುಗೆಗಳನ್ನು ತೊಟ್ಟು ನಮ್ಮ ಸಂಸ್ಕೃತಿಯನ್ನು ಬಿಂಭಿಸಿದರು.
ಸಂಸ್ಥೆಯ ನಿರ್ದೇಶಕ ರಾಧಾಕೃಷ್ಣ, ಶಿಕ್ಷಕರಾದ ಪವನ್, ಮಮತ, ಅಶ್ವಿನಿ, ಚಂದ್ರಕಲಾ, ಭಾರತಿ, ಉಮಾ, ನೂರ್ ಅಯಿಶಾ,ಮಂಜುಳಾ, ದಿವ್ಯ ಸೇರಿದಂತೆ ಇತರರು ಇದ್ದರು.
Comments