ಯೋಗ ದಿನದಂದು ಸಮಯ ಪಾಲನೆ ಕಡೆಗೆ ಗಮನ ನೀಡಲು ತೀರ್ಮಾನ





ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಅಂಗವಾಗಿ ವಿಶ್ವ ಯೋಗ ದಿನಾಚರಣಾ ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಟ್ರಸ್ಟ್ ಗೌರವ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳನ್ನು ಅಧ್ಯಕ್ಷರಾದ ಶ್ರೀ ಕೆ.ಎಂ.ಹನುಮಂತರಾಯಪ್ಪನವರು ತಿಳಿಸಿದರು, 21ರ ಬೆಳಿಗ್ಗೆ 6-15 ರಿಂದ 6-30 ರ ವರೆಗೆ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ, 6-30 ರಿಂದ ಪ್ರಾರ್ಥನೆ ಶ್ರೀಮತಿ ವತ್ಸಲ ಮತ್ತು ತಂಡದವರಿಂದ, ವೇದಿಕೆಗೆ ಅಥಿತಿಗಳ ಸ್ವಾಗತ ಕಾರ್ಯದರ್ಶಿ ಲೋಕೇಶಮೂರ್ತಿಯವರಿಂದ, ದೀಪ ಬೆಳಗುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ, 6-55 ಕ್ಕೆ ಸ್ವಾಮೀಜಿಯವರಿಂದ ಯೋಗಾಭ್ಯಾಸ 7-45 ರವರೆಗೆ. ಕಾರ್ಯಕ್ರಮದ ನಂತರ ಬದಿರುವ ಎಲ್ಲಾ ಯೋಗ ಪಟುಗಳಿಗೆ ಬಿಸ್ಕತ್ ಮತ್ತು ಬಾಳೆಹಣ್ಣು ವಿತರಣೆ. ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್ ಪದಾಧಿಕಾರಿಗಳು ಹಾಗೂ ನಗರದ ಎಲ್ಲಾ ಯೋಗ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು.
Comments