ಜಮೀರ್ ಅಹ್ಮದ್ ಲಕ್ಸುರಿ ಬೇಡಿಕೆಗೆ ಒಲ್ಲೆ ಎಂದ ಸಿಎಂ ಎಚ್’ಡಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂದ್ರೆ ನನಗಿಷ್ಟ, ಅವರ ಕಾರನ್ನೇ ಕೊಡಿ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬಳಸುತ್ತಿದ್ದ ಆ ಕಾರು ನನಗೆ ಬೇಕು. ಫಾರ್ಚೂನರ್ ಕಾರು ನನಗೆಕೊಡಿ ಎಂದು ಜಮೀರ್ ಅಹ್ಮದ್ ಡಿಪಿಎಆರ್ ಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಂ. 01, ಜಿ 5734 ನಂಬರಿಗೆ ಫಾರ್ಚೂನರ್ ಕಾರು ಬಳಸುತ್ತಿದ್ದರು. ಈಗ ಅದೇ ಕಾರು ಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದಾರೆ. ಜಮೀರ್ ಅಹ್ಮದ್ ಬೇಡಿಕೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರಾಕರಿಸಿದ್ದು, ಆ ಕಾರನ್ನು ಜಮೀರ್ ಗೆ ಕೊಡೋದು ಬೇಡ. ಆ ಕಾರನ್ನು ಯಾರಾದರೂ ಹಿರಿಯ ಮಂತ್ರಿಗಳಿಗೆ ಕೊಡೋಣ ಎಂದು ಸಿಎಂ ಎಚ್’ಡಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
Comments