BMTC ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ
ನಷ್ಟದಲ್ಲಿರುವ ಬಿ.ಎಂ.ಟಿ.ಸಿ ಸಂಸ್ಥೆಯನ್ನು ಲಾಭದ ಹಂತಕ್ಕೆ ತರುವ ನಿಟ್ಟಿನಲ್ಲಿ ಪ್ರಯಾಣಿಕ ಮೇಲೆ ಟಿಕೆಟ್ ಬೆಲೆ ಹೆಚ್ಚಳ ಹೊರೆಯನ್ನು ಹಾಕುವುದಕ್ಕೆ ಮುಂದಾಗಿದ್ದ ಸಮ್ಮಿಶ್ರ ಸರ್ಕಾರ ಈ ನಿರ್ಧಾರದಿಂದ ಹೊರ ಬಂದಿದೆ ಎನ್ನಲಾಗಿದೆ.
ಸದ್ಯಕ್ಕೆ ಬಿಎಂಟಿಸಿ ಟಿಕೆಟ್ ದರ ಹೆಚ್ಚಿಸುವುದಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಬಿಎಂಟಿಸಿ ಪ್ರಸ್ತಾವನೆಯನ್ನ ಸಚಿವ ತಮ್ಮಣ್ಣ ತಿರಸ್ಕರಿಸಿದ್ದು, ಸರ್ಕಾರ ಆರಂಭದಲ್ಲೇ ಟಿಕೆಟ್ ದರ ಹೈಕ್ ಮಾಡಿದರೆ ಸರ್ಕಾರಕ್ಕೆ ಡ್ಯಾಮೇಜ್ ಆಗುವುದನ್ನು ಮನಗಂಡಿರುವ ಮುಖ್ಯಮಂತ್ರಿಗಳು ಸಾರಿಗೆ ಸಚಿವರಿಗೆ ಸದ್ಯಕ್ಕೆ ಈ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ ಅಂತ ಹೇಳಿದ್ದಾರೆ. ಡಿಸೇಲ್ ದರ ಹೆಚ್ಚಳದಿಂದ ನಿಗಮಕ್ಕೆ ಕೋಟ್ಯಾಂತರ ನಷ್ಟವಾಗುವ ಹಿನ್ನೆಲೆ, ಬಿಎಂಟಿಸಿ ಬಸ್ ಪ್ರಯಾಣದ ದರ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಷ್ಟವನ್ನು ಸರಿದೂಗಿಸಲು ದರ ಹೆಚ್ಚಳ ಮಾಡಲು ಮನವಿ ಮಾಡಲಾಗಿತ್ತು. ಶೇ 15-20ರಷ್ಟು ಹೆಚ್ಚಳ ಮಾಡುವಂತೆ ಬಿಎಂಟಿಸಿ ಎಂ.ಡಿ.ಪೊನ್ನುಾಜ್ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಸಾರಿಗೆ ಸಚಿವರು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಾತಿಗೆ ಅನುಗುಣವಾಗಿ ನಡೆದುಕೊಂಡು ಬೆಲೆ ಏರಿಕೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.
Comments