ಅಧಿಕಾರವದಿಯ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಎಚ್.ಡಿ.ಕುಮಾರಸ್ವಾಮಿ..!!

18 Jun 2018 5:47 PM |
8192 Report

ರಾಜ್ಯದಲ್ಲಿ ಬಿಜೆಪಿಯನ್ನು ಯಶಸ್ವಿಯಾಗಿ ಅಧಿಕಾರದಿಂದ ದೂರವಿಟ್ಟು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಇದೀಗ ಒಂದು ತಿಂಗಳು ಕಳೆದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮೊನ್ನೆ ನೀಡಿದ ಹೇಳಿಕೆಯೊಂದು ರಾಜ್ಯದೆಲ್ಲೆಡೆ ಸಂಚಲನ ಸೃಷ್ಟಿಸಿತ್ತು. ಒಂದು ವರ್ಷ ನಮ್ಮ ಸರ್ಕಾರ ಸುಭದ್ರವಾಗಿರುತ್ತದೆ. ನನ್ನನ್ನು ಯಾರಿಂದಲೂ ಟಚ್ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಆ ಮೂಲಕ ಒಂದು ವರ್ಷದ ನಂತರ ಸರ್ಕಾರದ ಪರಿಸ್ಥಿತಿ ಏನಾಗಲಿದೆ ಎಂಬುದರ ಕುರಿತು ಎಲ್ಲೆಡೆ ಪ್ರಶ್ನೆ ಮೂಡಿತ್ತು. ಇದೀಗ ಮತ್ತೊಮ್ಮೆ ಸುದ್ದಿಗಾರರೊಂದಿಗೆಮಾತನಾಡಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು, ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿ ಆಡಳಿತ ನಡೆಸುತ್ತದೆ. ಹದಿನೈದು ವರ್ಷಗಳ ಕಾಲ ನಾವೇ ಆಡಳಿತದಲ್ಲಿರುತ್ತೇವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿ ಪಿ ನೇತೃತ್ವದ ಸರ್ಕಾರಗಳು ಹದಿನೈದು ವರ್ಷ ಆಡಳಿತ ನಡೆಸಿದ್ದವು. ಅದೇ ಮಾದರಿಯಲ್ಲಿ ನಾವು ಆಡಳಿತ ನಡೆಸುತ್ತೇವೆ ಎಂಬ ಭರವಸೆ ನನಗಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಆ ಮೂಲಕ ಸರ್ಕಾರದ ಭವಿಷ್ಯ ಐದು ವರ್ಷ ಭದ್ರವಾಗಿರಲಿದೆ ಎಂದಿದ್ದಾರೆ.

ಮೈತ್ರಿ ಸರ್ಕಾರದ ಬಗ್ಗೆ ಮಾಧ್ಯಮಗಳು ಇಲ್ಲ ಸಲ್ಲದ ವರದಿಗಳನ್ನು ಬಿತ್ತರಿಸುತ್ತಿವೆ. ಸಚಿವ ಸಂಪುಟದಲ್ಲಿ ಸ್ಥಾನಮಾನ ಸರಿಯಾಗಿ ಸಿಗದ ಕಾರಣ ಗುಂಪುಗಳಾಗಿದ್ದು ಸರ್ಕಾರ ಉಳಿಯುವುದಿಲ್ಲ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಒಂದು ವರ್ಷ ಸರಕಾರಕ್ಕೆ ಯಾವುದೇ ಆತಂಕ ಇಲ್ಲ. ಒಂದು ವರ್ಷವಾದರೂ ಕೆಲಸ ಮಾಡಲು ಬಿಡಿ ಎಂದು ಹೇಳಿದ್ದೇನೆಯೇ ಹೊರತು ಬೇರೆ ಅರ್ಥ ಕಲ್ಪಿಸಬೇಡಿ ಎಂದು ಮಾಧ್ಯಮಗಳಿಗೆ ಮುಖ್ಯಮಂತ್ರಿಗಳು ವಿನಂತಿ ಮಾಡಿದರು. ರಾಷ್ಟ್ರೀಯ ಪಕ್ಷಗಳ ಜೊತೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಸುಳ್ಳು. ಮಾಧ್ಯಮಗಳಿಗೆ ನಾವು ಹಾಗೆ ಕಾಣಿಸುತ್ತಿದ್ದೇವೆಯೇ ಹೊರತು ವಾಸ್ತವವಾಗಿ ಅದು ಸತ್ಯ ಅಲ್ಲ‌. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಎಲ್ಲವೂ ಮುಕ್ತವಾಗಿ ಕೆಲಸ ನಡೆಯುತ್ತಿದೆ ಎಂದಿದ್ದಾರೆ.

Edited By

Shruthi G

Reported By

hdk fans

Comments

Andy नमस्ते।  मैं अपोलो अस्पताल में एक फ्रेनोलॉजिस्ट हूं। हमारा अस्पताल किडनी सर्जरी में विशिष्ट है और हम एक संबंधित दाता के साथ गुर्दे की खरीद और प्रत्यारोपण के साथ भी निपटते हैं। हम भारतीय, तुर्की, यूएसए, मलेशिया में स्थित हैं। यदि आप किडनी बेचने या खरीदने में रुचि रखते हैं तो कृपया व्हाट्सएप, ईमेल पर नंबर + 9 1 9 343518612 के माध्यम से हमसे संपर्क करने में संकोच न करें। [email protected]