ಬಜೆಟ್ ವಿಚಾರ ಕುರಿತು ಮಾಜಿ ಸಿಎಂ ಸಿದ್ದುಗೆ ಹಾಲಿ ಡಿಸಿಎಂ ಖಡಕ್ ಟಾಂಗ್ : ಸಿಎಂ ಎಚ್’ಡಿಕೆ ಪರನಿಂತ ಪರಮೇಶ್ವರ್
ಹೊಸ ಸರ್ಕಾರ ಬಜೆಟ್ ಮಂಡನೆ ಮಾಡುವುದು ಬೇಡ, ನಮ್ಮ ಹಿಂದಿನ ಕಾಂಗ್ರೆಸ್ ಸರ್ಕಾರ ಮಂಡನೆ ಮಾಡಿರುವ ಬಜೆಟ್ ಅನ್ನು ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರ ಅದನ್ನೇ ಮುಂದುವರಿಸಿ ಕೊಂಡು ಹೋಗಲಿ, ಅವಶ್ಯಕತೆ ಇದ್ದರೆ ಕುಮಾರಸ್ವಾಮಿ ಅವರು ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದು ಅದಕ್ಕೆ ಅನುಗುಣವಾಗಿ ಪೂರಕ ಬಜೆಟ್ ಅನ್ನು ಮಂಡಿಸ ಬಹುದು ಅಂತ ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಸಮ್ಮಿಶ್ರ ಸರ್ಕಾರದ ಹೊಸ ಬಜೆಟ್ ಗೆ ಅಡ್ಡಗಾಲು ಹಾಕಿದ್ದರು.
ಈ ನಡುವೆ ಮಾಜಿ ಸಿ.ಎಂ ಸಿದ್ದು ಮಾತಿಗೆ ಟಾಂಗ್ ನೀಡಿರುವ ಹಾಲಿ ಡಿಸಿಎಂ ಸಿಎಂ ಡಾ.ಜಿ ಪರಮೇಶ್ವರ್ ಬ್ಯಾಟ್ ಬೀಸಿದ್ದು, ಸಿ.ಎಂ ಕುಮಾರಸ್ವಾಮಿ ಅವರು ಹೊಸ ಬಜೆಟ್ ಮಂಡನೆ ಮಾಡಲಿ, ಪ್ರತಿ ಬಾರಿ ಸರ್ಕಾರ ರಚನೆ ಮಾಡಿದ ವೇಳೆಯಲ್ಲಿ ಹೊಸ ಬಜೆಟ್ ಅನ್ನು ಮಂಡನೆ ಮಾಡುವುದಕ್ಕೆ ಅವಕಾಶವಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಪರವಾಗಿ ಹೇಳಿದ್ದಾರೆ. ಇದೇ ನಡುವೆ ಮಾಜಿ ಸಿಎಂ ಸಿದ್ದು ಮಾತಿಗೆ ಸಿ.ಎಂ ಕುಮಾರಸ್ವಾಮಿ ಕೂಡ ಟಾಂಗ್ ನೀಡಿದ್ದು, ನಾನು ಜುಲೈ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುವುದಕ್ಕೆ ಸಿದ್ದತೆ ನಡೆಸುತ್ತಿರುವೆ. ಆದರೆ ಕೆಲವು ನನಗೆ ಕ್ರೆಡಿಟ್ ಬರುತ್ತದೆ ಎನ್ನುವ ಕಾರಣದಿಂದ, ಬಜೆಟ್ ಯಾಕೆ ಬೇಕು ಪೂರಕ ಬಜೆಟ್ ಮಂಡಿಸಿ ಸಾಕು ಅಂತ ಹೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರ ವಿರುದ್ದು ಕಿಡಿ ಕಾರಿದರು.
Comments