22 ನೇ ವಾರ್ಡಿನಲ್ಲಿ ತಣ್ಣಗೆ ಸಾಗುತ್ತಿರುವ ಮತದಾನ ಅಭ್ಯರ್ಥಿಗಳಿಂದ ಮತ ಯಾಚನೆ
ಇಂದು ನಡೆಯುತ್ತಿರುವ ಮರು ಚುನಾವಣೆಯ ಮತದಾನ ನೀರಸವಾಗಿ ಸಾಗುತ್ತಿದೆ, ಸ್ಪರ್ಧಿಸಿರುವ ಮೂರೂ ಪ್ರಮುಖ ಪಕ್ಷಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯೂ ಸೇರಿದಂತೆ ಕಣದಲ್ಲಿರುವ ನಾಲ್ವರೂ ತಮ್ಮ ವಾರ್ಡಿನ ಮತದಾರರನ್ನು ಓಲೈಸಿ ಕರೆತರಲು ಕಾರ್ಯಕರ್ತರನ್ನು ಕಳುಹಿಸುತ್ತಿದ್ದಾರೆ, ಕಳೆದ ಎಂಟು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ಮಾಡಿದ್ದರೂ, ಅಭ್ಯರ್ಥಿಗಳಿಗಿರುವ ಹುಮ್ಮಸ್ಸು ಮತದಾರರಿಗೆ ಇಲ್ಲ. ಪ್ರಮುಖ ಪಕ್ಷಗಳ ಹಿರಿಯ ಮತ್ತು ಕಿರಿಯ ನಾಯಕರುಗಳು ಬೆಳಿಗಿನಿಂದಲೇ ಮತದಾನದ ಕೇಂದ್ರದ ಹತ್ತಿರ ಕುಳಿತು ಎಲ್ಲರನ್ನೂ ಹುರಿದುಂಬಿಸುತ್ತಿದ್ದಾರೆ. ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷರಾದ ಕೆ.ಎಂ.ಹನುಮಂತರಾಯಪ್ಪ, ನಗರ ಅಧ್ಯಕ್ಷ ರಂಗರಾಜು, ಕಾರ್ಯದರ್ಶಿ ಶ್ರೀನಿವಾಸ್, ಜೆಡಿಎಸ್ ಪಕ್ಷದ ನಗರ ಅಧ್ಯಕ್ಷ ರವಿಕುಮಾರ್, ನಗರಸಭಾ ಸದಸ್ಯ ಶಿವಕುಮಾರ್, ನಗರಸಭಾ ಅಧ್ಯಕ್ಷ ತ.ನ.ಪ್ರಧುದೇವ್, ಕಾಂಗ್ರೆಸ್ ಪಕ್ಷದ ಪ್ರಧಾನಕಾರ್ಯದರ್ಶಿ ಯೋಗ ನಟರಾಜ್, ಉಪಾಧ್ಯಕ್ಷೆ ಜಯಲಕ್ಷ್ಮಿ ಸೇರಿದಂತೆ ಹಜರಿದ್ದು ಮತದಾರರನ್ನು ಓಲೈಸುತ್ತಿದ್ದಾರೆ.
Comments