ಸಾಲಮನ್ನಾ ಕುರಿತು ರೈತರಿಗೆ ಗುಡ್ ನ್ಯೂಸ್..! ಎಚ್'ಡಿಕೆ ಹೇಳಿದ್ದೇನು?
ರೈತರ ಸಾಲಮನ್ನ ಮನ್ನ ಮಾಡುವ ಬಗ್ಗೆ ಬಜೆಟ್ ನಲ್ಲಿ ಸಾಲಮನ್ನಾ ಘೋಷಣೆ ಮಾಡಲಾಗುವುದು ಅಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಸ್ಥಾನ ಮುಂಬರುವ ಲೋಕಸಭಾ ಚುನಾವಣೆ ತನಕ ಸೇಫ್ ಆಗಿ ಇರುತ್ತದೆ. ಅಂತ ಹೇಳಿದರು. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಸಾಲಮನ್ನಾ ಮಾಡುವುದು ಹೇಗೆ ಅಂತ ನನಗೆ ತಿಳಿದಿದೆ ಎಂದು ಹೇಳಿದರು. ಇಂದು ಬೆಳಗ್ಗೆ ಟ್ವಿಟರ್ ನಲ್ಲಿ ಕೂಡ ಸಿಎಂ ಎಚ್'ಡಿಕೆ ರೈತರ ಸಾಲಮನ್ನಾ ಮಾಡುವ ಬಗ್ಗೆ ಟ್ವಿಟ್ ಮಾಡಿದ್ದರು.
Comments