ಹೇಮಾವತಿಪೇಟೆಯಲ್ಲಿ ನಗರ ಬಿಜೆಪಿ ಪದಾಧಿಕಾರಿಗಳಿಂದ ಮತಯಾಚನೆ
ದೊಡ್ಡಬಳ್ಳಾಪುರ ನಗರಸಭಾ 22ನೇ ವಾರ್ಡ್ ಹೇಮಾವತಿಪೇಟೆಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀಮತಿ ಕೋಮಲ ಪರಪ್ಪರವರ ಪರವಾಗಿ ಈ ದಿನ ಹೇಮಾವತಿಪೇಟೆಯಲ್ಲಿ ಮತದಾರರ ಮನೆಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎಸ್.ಶಿವಶಂಕರ್ ರವರು ಹಾಗೂ ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ಬಿ.ಮುದ್ದಪ್ಪನವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ಜಗನ್ನಾಥ್, ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಗಿರಿಜಾ, ಕವಿತ, ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾದ ಶಿವ,ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಇನ್ನೂ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.
Comments