ಬಿಗ್ ಬ್ರೇಕಿಂಗ್ : ಕುತೂಹಲ ಕೆರಳಿಸಿದ ರೆಬೆಲ್ ಸ್ಟಾರ್- ಎಚ್’ಡಿಕೆ ದಿಢೀರ್ ಭೇಟಿ.. ?! ತೆನೆ ಹೊರಲಿದ್ದಾರಾ ಅಂಬಿ..?!
ರಾಜಕೀಯವೇ ಬೇಡ ಅಂತಾ ದೂರ ಸರಿದಿದ್ದ, ಮಾಜಿ ಸಚಿವ ಅಂಬರೀಶ್ ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ಬಳಿ ಕಾಣಿಸಿ ಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ ಪುನಶ್ಚೇತನ ಕುರಿತ ಸಭೆ, ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಭೆ, ಜತೆಗೆ ಜನತಾದರ್ಶನದಲ್ಲಿ ಬ್ಯುಸಿಯಾಗಿದ್ದರು. ನಿನ್ನೆ ಸಂಜೆ 4:30 ಗಂಟೆ ಸುಮಾರಿಗೆ ಸಿಎಂ ಗೃಹ ಕಚೇರಿಗೆ ಬಂದ ಅಂಬರೀಶ್ ಒಂದು ಗಂಟೆ ಕಾಲ ಕುಮಾರಸ್ವಾಮಿಯವರಿಗಾಗಿ ಕಾದು ಕುಳಿತಿದರು. ಬಳಿಕ ಇಬ್ಬರೂ ನಾಯಕರು ಬಾಗಿಲು ಮುಚ್ಚಿದ ಕೋಣೆಯಲ್ಲಿ ರಹಸ್ಯ ಮಾತುಕತೆ ನಡೆಸಿದರು ಎನ್ನಲಾಗಿದೆ. ಇತ್ತೀಚೆಗೆ ಅಂಬರೀಶ್ ಜೆಡಿಎಸ್ ನಾಯಕರೊಂದಿಗೆ ಹೆಚ್ಚು ಆತ್ಮೀಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಅಂಬರೀಶ್ ಕೆಲಸ ಮಾಡಿದ್ದರು. ಈಗ ಅಂಬರೀಶ್ ಅಧಿಕೃತವಾಗಿ ಜೆಡಿಎಸ್ ಸೇರಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಅದೂ ಕೂಡ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಅಂಬರೀಶ್ ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
Comments