Big Breaking : ಜಿಲ್ಲಾ ಉಸ್ತುವಾರಿ ಪಟ್ಟ ಹಂಚಿಕೆ ಫೈನಲ್..! ಯಾರ ಪಾಲಿಗೆ ಯಾವ ಜಿಲ್ಲೆ..?! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಸರಿಸುಮಾರು ತಿಂಗಳ ಬಳಿಕ ಸಚಿವ ಸಂಪುಟದ ಸದಸ್ಯರುಗಳಿಗೆ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ.
ಇಂದು ಸಂಜೆ ನಡೆಯಲಿರುವ ಸಮನ್ವಯ ಸಮಿತಿ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಹಂಚಿಕೆ ಪಟ್ಟಿ ಹೊರಬೀಳಲಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರಿಗೆ ಸ್ವಂತ ಜಿಲ್ಲೆ ಹಾಸನ ಜಿಲ್ಲೆಯ ಉಸ್ತುವಾರಿ ದಕ್ಕಲಿದೆ. ಮತ್ತೊಂದೆಡೆ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಗೆ ರಾಮನಗರ ಜಿಲ್ಲೆ ದೊರಕಲಿದ್ದು, ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಗೆ ಯು.ಟಿ. ಖಾದರ್ ಜಿಲ್ಲೆ ಉಸ್ತುವಾರಿ ಸಚಿವರಾಗಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ. ವಿವಿಧ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಹೀಗಿದ್ದು, ಈ ಪಟ್ಟಿ ಬಹುತೇಕ ಅಂತಿಮಗೊಳ್ಳಲಿದೆ ಎಂದು ಸಿಎಂ ಕಾರ್ಯಾಲಯದ ಮೂಲಗಳು ತಿಳಿಸಿವೆ.
ಡಾ. ಜಿ. ಪರಮೇಶ್ವರ್- ತುಮಕೂರು; ಡಿ.ಕೆ. ಶಿವಕುಮಾರ್-ರಾಮನಗರ; ಎಚ್.ಡಿ. ರೇವಣ್ಣ-ಹಾಸನ; ಯು.ಟಿ. ಖಾದರ್- ಮಂಗಳೂರು; ಆರ್.ವಿ. ದೇಶಪಾಂಡೆ- ಉತ್ತರಕನ್ನಡ; ಜಿ.ಟಿ. ದೇವೇಗೌಡ- ಮೈಸೂರು; ಡಿ.ಸಿ. ತಮ್ಮಣ್ಣ-ಮಂಡ್ಯ; ಪುಟ್ಟರಂಗಶೆಟ್ಟಿ- ಚಾಮರಾಜನಗರ; ಎನ್.ಎಚ್.ಶಿವಶಂಕರರೆಡ್ಡಿ- ಚಿಕ್ಕಬಳ್ಳಾಪುರ; ಕೃಷ್ಣಬೈರೇಗೌಡ- ಕೋಲಾರ; ಕೆ.ಜೆ. ಜಾರ್ಜ್- ಬೆಂಗಳೂರು ನಗರ; ರಮೇಶ್ ಜಾರಕಿಹೊಳಿ- ಬೆಳಗಾವಿ; ಪ್ರಿಯಾಂಕ್ ಖರ್ಗೆ- ಕಲಬುರಗಿ; ಶಿವಾನಂದ್ ಪಾಟೀಲ- ವಿಜಯಪುರ; ಬಂಡೆಪ್ಪ ಕಾಶಂಪುರ್- ಬೀದರ್; ರಾಜಶೇಖರ ಪಾಟೀಲ- ಬಾಗಲಕೋಟೆ; ಆರ್.ಶಂಕರ್- ಹಾವೇರಿ; ಜಯಮಾಲಾ- ಶಿವಮೊಗ್ಗ; ಎಂ.ಸಿ. ಮನಗೂಳಿ- ಕೊಪ್ಪಳ; ವೆಂಕಟರಾವ್ ನಾಡಗೌಡ- ರಾಯಚೂರು; ಎಸ್.ಆರ್. ಶ್ರೀನಿವಾಸ್- ಚಿಕ್ಕಮಗಳೂರು.
Comments