ಯಾರ ಕೈ ಹಿಡಿಯುವಳು ಹೇಮಾವತಿ?





ದಿನಾಂಕ 18ರ ಸೋಮವಾರ ನಡೆಯಲಿರುವ ಮರು ಚುನಾವಣೆಗೆ ಸ್ಪರ್ಧಿಸಿರುವ ಮೂರೂ ಪ್ರಮುಖ ಪಕ್ಷಗಳು ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿಯೂ ಸೇರಿದಂತೆ ಕಣದಲ್ಲಿರುವ ನಾಲ್ವರೂ ನಗರ್ತರಪೇಟೆ ವಾರ್ಡಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ಮಾಡುತ್ತಿದ್ದಾರೆ, ಪ್ರಮುಖವಾಗಿ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಿರುವ ಭಾಸ್ಕರ್ ತಮ್ಮ ಪಕ್ಷದ ನಾಯಕರುಗಳು ಮತ್ತು ಅಭಿಮಾನಿಗಳೊಂದಿಗೆ ವಾರ್ಡನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಪ್ರಚಾರ ನಡೆಸುತ್ತಿದ್ದರೆ, ಮತದಾರರ ಒಲವು ತನ್ನ ಕಡೆ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ದಿನೇಶ್ ಗೆಲ್ಲಲು ಎಲ್ಲಾ ತಂತ್ರಗಳನ್ನೂ ಮಾಡುತ್ತಾ ವಾರ್ಡಿನ ಮಹಿಳಾ ಮತದಾರರನ್ನು ಓಲೈಸಲು ತಮ್ಮ ಪಕ್ಷದ ಮಹಿಳಾ ನಾಯಕಿಯರು ಮತ್ತು ದೇವಾಂಗ ಮಂಡಲಿ ನಿರ್ದೇಶಕಿಯರನ್ನು ಪ್ರಚಾರಕ್ಕೆ ಇಳಿಸಿದ್ದಾರೆ. ಇಬ್ಬರೂ ಗೆಲುವು ನನ್ನದೇ ಎಂದು ಪ್ರಚಾರ ನಡೆಸಿದರೆ, ಬಿಜೆಪಿ ಪಕ್ಷದಿಂದ ಸ್ಪರ್ಧಿಸಿರುವ ಶ್ರೀಮತಿ ಕೋಮಲ, ಪಕ್ಷೇತರ ಅಭ್ಯರ್ಥಿ ನಾಗರಾಜ್ ತಮ್ಮ ಗೆಲುವಿಗಾಗಿ ಸದ್ದಿಲ್ಲದೆ ಪ್ರಚಾರ ಮಾಡುತ್ತಿದ್ದಾರೆ.
Comments